WATCH : ಕುರಿ ಕಾಯೋ ಹುಡುಗನ ಹಾಡಿಗೆ ಫಿದಾ ಆದ್ರು ಕರ್ನಾಟಕದ ಜನ

ಗದಗ :- ಕುರಿ ಕಾಯುತ್ತಾ ಇರೋ ಕುರಿಗಾಹಿ ಹುಡುಗನೊಬ್ಬ ರಾತ್ರೋ ರಾತ್ರೀ ಸಮಾಜಿಕ ಜಾಲತಾಣಗಳಲ್ಲಿ ಫೇಮಸ್ ಆಗಿದ್ದಾನೆ.

ಸಾಗರಿಯೇ ಸಾಗರಿಯೇ ಹಾಡನ್ನು ತನ್ನ ಫೋನಿನಲ್ಲಿ ಯುವಕ ರೆಕಾರ್ಡ್ ಮಾಡಿ ಫೇಸ್‌ಬುಕ್‌ಗೆ ಅಪ್‌ಲೋಡ್‌ ಮಾಡಿದ್ದು, ಕರ್ನಾಟಕ ಜನ ಈ ಹುಡುಗನ ಪ್ರತಿಭೆಗೆ ಮೆಚ್ಚಿದ್ದಾರೆ.

ಎಲ್ಲೆಡೆ ಫೇಮಸ್ ಆಗುತ್ತಿರುವ ಈ ಯುವಕನ ಹೆಸರು ಹನುಮಂತ ಬಟ್ಟೂರ. ಈತ  ಮೂಲತಃ ಗದಗ ಜಿಲ್ಲೆ ಶಿರಹಟ್ಟಿಯವನಾಗಿದ್ದು, ಕುರಿ ಕಾಯುವ ವೇಳೆ ಈ ಹಾಡನ್ನು ಹಾಡಿ ಫೇಸ್‌ಬುಕ್‌ಗೆ ಅಪ್‌ಲೋಡ್ ಮಾಡಿದ್ದಾನೆ. ಈತನ ಹಾಡನ್ನು ಕೇಳಿದ ಸಾವಿರಾರು ಮಂದಿ, ಲೈಕ್ಸ್, ಶೇರ್‌ ಮಾಡಿದ್ದು, ಉತ್ತಮ ಭವಿಷ್ಯವಿದೆ ಎಂದು ಕಮೆಂಟ್‌ ಸಹ ಮಾಡಿದ್ದಾರೆ.

ಹನುಮಂತನಿಗೆ ಚಿಕ್ಕಂದಿನಿಂದ ಸಿನಿಮಾ ನೋಡುವ ಗೀಳು. ಆರಂಭದಿಂದ ಡಾ. ರಾಜ್ ಕುಮಾರ್ ಅವರ ಅಭಿಮಾನಿ ಆಗಿದ್ದೆ. ಬಳಿಕ ಎಲ್ಲಾ ನಾಯಕರ ಸಿನಿಮಾಗಳನ್ನು ನೋಡುತ್ತಿದ್ದೆ. ಅದೇ ರೀತಿ ಹಾಡುವ ಹುಚ್ಚೂ ಬೆಳೆಯಿತು ಎಂದಿದ್ದಾನೆ.

ಇಂತಹ ಅದ್ಬುತ ಕಲಾವಿದರು ರಾಜ್ಯದಲ್ಲಿ ಇನ್ನೂ ಸಾಕಷ್ಟು ಮಂದಿ ಇದ್ದಾರೆ. ಆದರೆ ಅವರ ಪ್ರಚಾರವಾಗಬೇಕಿದೆ. ಇನ್ನು ಕುರಿ ಕಾಯುತ್ತಿರುವ ಹನುಮಂತನ ಹಾಡು ಕೇಳಿದವರು ಆತನ ಕಂಠಕ್ಕೆ ಫಿದಾ ಆಗಿರೋದಂತೂ ಸತ್ಯ.

Leave a Reply

Your email address will not be published.

Social Media Auto Publish Powered By : XYZScripts.com