ನನ್ನ ದುರಾದೃಷ್ಟ, ನನ್ನ ತಂದೆ ತಾಯಿ ಕನ್ನಡ ಕಲಿಸಿಲ್ಲ ಏನ್ಮಾಡಲಿ ಎಂದ ಜಮೀರ್ ಅಹ್ಮದ್‌…!

ತುಮಕೂರು : ನನಗೆ ಕನ್ನಡ ಸರಿಯಾಗಿ ಮಾತನಾಡಲು ಬರಲ್ಲ. ಆದ್ದರಿಂದ ನಾನು ಇಂಗ್ಲೀಷ್‌ನಲ್ಲಿ ಪ್ರಮಾಣ ವಚನ ಸ್ವೀಕಾರ ಮಾಡಿದ್ದೇನೆ. ನನ್ನ ತಂದೆ ತಾಯಿ ನನಗೆ ಸರಿಯಾಗಿ ಕನ್ನಡ ಕಲಿಸಿಲ್ಲ ಎಂದು ಸಚಿವ ಜಮೀರ್ ಅಹ್ಮದ್‌ ಹೇಳಿದ್ದಾರೆ.

ಸಚಿವರಾದ ಬಳಿಕ ತುಮಕೂರಿನ ಸಿದ್ಧಗಂಗಾ ಮಠಕ್ಕೆ ಭೇಟಿ ನೀಡಿ ಶ್ರೀಗಳ ಆಶಿರ್ವಾದ ಪಡೆದ ಜಮೀರ್ ಅಹ್ಮದ್‌ ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ್ದು, ಕನ್ನಡ ಕಲಿಯದಿದ್ದಿದ್ದು ನನ್ನ ದುರಾದೃಷ್ಠ. ಬೇಕಂತಲೇ ಇಂಗ್ಲೀಷ್‌ನಲ್ಲಿ ಪ್ರಮಾಣ ವಚನ ಸ್ವೀಕಾರ ಮಾಡಿದ್ದರೆ ನನಗೆ ಗಲ್ಲು ಶಿಕ್ಷೆ ವಿಧಿಸಲಿ. ನಾನು ಕನ್ನಡದಲ್ಲಿ ಪ್ರಮಾಣವಚನ ಸ್ವೀಕಾರ ಮಾಡದ್ದಕ್ಕೆ ಜನರಿಗೆ ಎಷ್ಟು ನೋವಾಗಿದೆಯೋ ಅದಕ್ಕಿಂತ ಹೆಚ್ಚಿಗೆ ನನಗೆ ನೋವಾಗಿದೆ ಎಂದಿದ್ದಾರೆ.

ಸಮ್ಮಿಶ್ರ ಸರ್ಕಾರದಲ್ಲಿ ನನಗೆ ಮಂತ್ರಿ ಸ್ಥಾನ ನೀಡಿದ್ದಾರೆ. ಐದು ವರ್ಷದಲ್ಲಿ  ನಾನು ಗಿನ್ನೆಸ್‌ ಲೆವೆಲ್‌ಗೆ ದಾಖಲೆ ಮಾಡುತ್ತೇನೆ.  ಅಷ್ಟು ನಿಷ್ಟನಾಗಿ ಕೆಲಸ ಮಾಡುತ್ತೇನೆ ಎಂದಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com