ಸ್ಯಾಂಡಲ್‌ವುಡ್‌ಗೆ ಪದ್ಮಾವತಿ ರೀ ಎಂಟ್ರಿ : ಮತ್ತೆ ಶುರುವಾಗಲಿದೆ ಮೋಹಕತಾರೆಯ ಹವಾ…!

ರಾಜಕೀಯಕ್ಕೆ ಎಂಟ್ರಿ ಕೊಟ್ಟ ಬಳಿಕ ಮೋಹಕ ತಾರೆ ರಮ್ಯಾ ಸಿನಿಮಾ ಜಗತ್ತಿನಿಂದ ದೂರವಾಗಿದ್ದರು. ಆದರೆ ಇಂದಿಗೂ ರಮ್ಯಾ ಅವರ ಅಭಿಮಾನಿ ಗಳು ರಮ್ಯಾ  ಸಿನಿಮಾ ಇಂಡಸ್ಟ್ರಿಗೆ ಬರಬೇಕು ಎಂದು ಕಾಯುತ್ತಿರುವುದಂತೂ ಸತ್ಯ.

ಕಳೆದ ಲೋಕಸಭಾ ಚುನಾವಣೆಯಲ್ಲಿ ರಮ್ಯಾ ಸೋಲುಂಡ ಬಳಿಕ ಮತ್ತೆ ಚಂದನವನಕ್ಕೆ ಎಂಟ್ರಿ ಕೊಡುತ್ತಾರೆ ಎಂಬ ಮಾತು ಕೇಳಿಬಂದಿತ್ತು. ಆದರೆ ಅಭಿಮಾನಿಗಳಿಗೆ ನಿರಾಸೆಯಾಗಿದ್ದು, ಎಐಸಿಸಿಯ ಉನ್ನತ ಹುದ್ದೆಗೆ ಆಯ್ಕೆಯಾಗಿದ್ದರು.

ಇಷ್ಟಾದರೂ ರಮ್ಯಾ ಸಿನಿಮಾಗೆ ಬರ್ತಾರೆ ಎಂಬ ಮಾತು ಕೇಳಿಬರುತ್ತಿದ್ದು, ಈ ಮಾತು ಈಗ ನಿಜವಾಗಿದೆ. ನಾನು ಸಿನಿಮಾಗೆ ಮತ್ತೆ ಬರುತ್ತೇನೆ ಎಂದು ರಮ್ಯಾ ಹೇಳಿದ್ದು, 2019ರ ನಂತರ ರಮ್ಯಾ ಅವರನ್ನ ಮತ್ತೆ ಬೆಳ್ಳಿತೆರೆಯಲ್ಲಿ ನೋಡಬಹುದಂತೆ.

ಅಲ್ಲದೆ ರಕ್ಷಿತ್ ಶೆಟ್ಟಿ ಅಭಿನಯದ ‘ಅವನೇ ಶ್ರೀಮನ್ನಾರಾಯಣ’ ಚಿತ್ರದ ಟೀಸರ್ ನೋಡಿದ ರಮ್ಯಾ, ಟೀಸರ್ ಹಾಗೂ ರಕ್ಷಿತ್ ಶೆಟ್ಟಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದನ್ನ ಕಂಡು ಖುಷಿಯಾದ ರಕ್ಷಿತ್ ಶೆಟ್ಟಿ ‘ಥ್ಯಾಂಕ್ಸ್ ಹೇಳಿ, ನಿಮ್ಮನ್ನ ಮತ್ತೆ ಬೆಳ್ಳಿತೆರೆಯಲ್ಲಿ ನೋಡುವ ಆಸೆ ಇದೆ’ ಎಂದು ಟ್ವೀಟ್ ಮಾಡಿದ್ದಾರೆ. ಇದಕ್ಕೆ ಉತ್ತರಿಸಿರುವ ರಮ್ಯಾ ”After 2019” ಎಂದು ಪ್ರತಿಕ್ರಿಯೆ ಕೊಟ್ಟಿದ್ದಾರೆ.

 

Leave a Reply

Your email address will not be published.

Social Media Auto Publish Powered By : XYZScripts.com