ಮಂಡ್ಯ : ಸಿನೆಮಾ ಶೂಟಿಂಗ್ ವೇಳೆ ಮಕ್ಕಳೊಂದಿಗೆ ಕ್ರಿಕೆಟ್ ಆಡಿದ ಸಿಎಂ ಪುತ್ರ ನಿಖಿಲ್

ಮಂಡ್ಯ : ಸಿನಿಮಾ ಚಿತ್ರೀಕರಣದ ವೇಳೆ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಅವರ ಪುತ್ರ ನಿಖಿಲ್ ಗ್ರಾಮೀಣ ಮಕ್ಕಳೊಂದಿಗೆ ಕ್ರಿಕೆಟ್ ಆಡಿದ್ದಾರೆ. ಕೆಆರ್‌ಎಸ್‌ನ ನಾರ್ಥ್ ಬ್ಯಾಂಕ್ ಬಳಿ ನಡೆಯುತ್ತಿರುವ ಸೀತಾರಾಮ ಕಲ್ಯಾಣ ಚಿತ್ರದ ಚಿತ್ರೀಕರಣದ ವೇಳೆ ನಿಖಿಲ್ ಮಕ್ಕಳೊಂದಿಗೆ ಕ್ರಿಕೆಟ್ ಆಟವಾಡಿದ್ದಾರೆ.

ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಕೆಆರ್‌ಎಸ್ ನಾರ್ಥ್ ಬ್ಯಾಂಕ್ ಬಳಿಯಲ್ಲಿ ಕಳೆದೊಂದು ವಾರದಿಂದ ‘ಸೀತಾರಮ ಕಲ್ಯಾಣ’ ಚಿತ್ರದ ಚಿತ್ರೀಕರಣ ನಡೆಯುತ್ತಿದೆ. ನಿಖಿಲ್ ಜೊತೆ ಕ್ರಿಕೆಟ್ ಆಡಿದ ಮಕ್ಕಳು ಸಂಭ್ರಮಿಸಿದ್ದಾರೆ. ಚಿತ್ರೀಕರಣದಲ್ಲಿ ನಟಿ ರುಚಿತಾರಾಮ್ ಸಹ ಭಾಗಿಯಾಗಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com