ಬೆಳ್ಳಂ ಬೆಳಗ್ಗೆ ದೇಶದ ಹಲವೆಡೆ ಅಗ್ನಿಯ ರುದ್ರ ನರ್ತನ : 35ಕ್ಕೂ ಹೆಚ್ಚು ಮಂದಿಗೆ ಸ್ಥಿತಿ ಗಂಭೀರ

ಗುಜರಾತ್‌ನ ಸೂರತ್‌ನಲ್ಲಿ ಬಟ್ಟೆಗೆ ಬಣ್ಣ ಹಾಕುವ ಕಾರ್ಖಾನೆಯ ಚಾವಣಿ ಕುಸಿದು ಅಗ್ನಿ ಅವಘಡ ಸಂಭವಿಸಿದೆ. ಚಾವಣಿ ಕುಸಿದಿದ್ದರಿಂದ ತೈಲದ ಪೈಪ್‌ ಒಡೆದು ಬೆಂಕಿ ಹೊತ್ತಿಕೊಂಡಿದೆ. 35ಕ್ಕೂ ಹೆಚ್ಚು ಕಾರ್ಮಿಕರಿಗೆ ಗಂಭೀರ ಗಾಯಗವಾಗಿದ್ದು,  ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಬಿಹಾರದ ಧೀರಜ್‌ಗಂಜ್‌ ಪ್ರದೇಶದಲ್ಲಿರುವ ಎಲ್‌ಪಿಜಿ ಸಿಲಿಂಡರ್‌ ಗೋಡೌನ್‌ನಲ್ಲಿ ಬೆಂಕಿ ಅನಾಹುತ ಸಂಭವಿಸಿದೆ. ಇನ್ನೂ 6 ಅಗ್ನಿಶಾಮಕದಳದ ವಾಹನಗಳು, ಎನ್‌ಡಿಆರ್‌ಎಫ್‌‌ ಪಡೆ ಬೆಂಕಿ ನಂದಿಸಲು ಹರಸಾಹಸ  ಪಡುತ್ತಿದ್ದಾರೆ. ಸಿಲಿಂಡರ್‌ ಗೋಡೌನ್‌ನಲ್ಲಿ ಬೆಂಕಿ ಕಾಣಿಸಿಕೊಂಡಿರುವುದು ಸುತ್ತಮುತ್ತಲಿನ ಪ್ರದೇಶದ ಜನರಲ್ಲಿ ತೀವ್ರ ಆತಂಕ ಉಂಟುಮಾಡಿದೆ.
ಇನ್ನು ಹೈದ್ರಬಾದ್‌‌‌ನಲ್ಲಿ ಪೇಯಿಂಟ್‌ ಗೋಡೌನ್‌ನಲ್ಲೂ ಅಗ್ನಿ ಅನಾಹುತ ಸಂಭವಿಸಿದ್ದು, 8 ಅಗ್ನಿಶಾಮಕ ದಳ ವಾಹನಗಳು ಸ್ಥಳಕ್ಕೆ ದೌಡಾಯಿಸಿವೆ.ಮುಂಬೈನ ಕಟ್ಟಡವೊಂದು ಕೂಡ ಬೆಂಕಿಗಾಹುತಿಯಾಗಿದೆ ಎಂದು ರಾಷ್ಟೀಯ ಮಾಧ್ಯಮಗಳು  ವರದಿ ಮಾಡಿದೆ.

Leave a Reply

Your email address will not be published.

Social Media Auto Publish Powered By : XYZScripts.com