WATCH : ಬಿಜೆಪಿ ಶಾಸಕನಿಂದ ಪೇದೆಗೆ ಕಪಾಳ ಮೋಕ್ಷ : ದರ್ಪ ಮೆರೆದ ನಾಯಕನ ವಿರುದ್ಧ ಕೇಸ್‌

ಭೋಪಾಲ್‍ : ಕರ್ತವ್ಯ  ನಿರತ ಪೊಲೀಸ್‍ ಪೇದೆಗೆ ಬಿಜೆಪಿ ಶಾಸಕರೊಬ್ಬರು ಕಪಾಳ ಮೋಕ್ಷ ಮಾಡಿರುವ ಘಟನೆ ಮಧ್ಯ ಪ್ರದೇಶದ ದೇವಾಸ್‍ ಜಿಲ್ಲೆಯ ಉದಯ್ ನಗರ ಪೊಲೀಸ್‍ ಠಾಣೆಯಲ್ಲಿ  ನಡೆದಿದೆ.
ಚಂಪಾಲಾಲ್ ದೇವ್ಡಾ ಕಪಾಳ ಮೋಕ್ಷ ಮಾಡಿದ್ದು, ಈ ದೃಶ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ.  ಬಿಜೆಪಿ ಶಾಸಕ ಚಂಪಾಲಾಲ್ ದೇವ್ಡಾ  ವಿರುದ್ಧ ಎಲ್ಲೆಡೆ ಆಕ್ರೋಶ ವ್ಯಕ್ತವಾಗುತ್ತಿದ್ದು, ಪ್ರಕರಣ ದಾಖಲಿಸಿಕೊಂಡಿರುವುದಾಗಿ ಪೊಲೀಸ್‌ ಮೂಲಗಳು ತಿಳಿಸಿವೆ. ಅಲ್ಲದೆ ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಯಾಗುತ್ತಿದೆ.

ಗುರುವಾರ ರಾತ್ರಿ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ವಿಚಾರಣೆಗೆ ಕರೆತಂದಿದ್ದ ಪೋಲೀಸರು ಅವರನ್ನು ನಿರ್ಬಂಧಿತ ಪ್ರದೇಶದಲ್ಲಿ ಕುಳ್ಳರಿಸಿದ್ದರು. ಆಗ ಅಲ್ಲಿಗೆ ಪ್ರವೇಶಿಸಿದ ಶಾಸಕ ದೇವ್ಡಾ  ಅವರ ಸೋದರಳಿಯ ನಿರ್ಬಂಧಿತ ಪ್ರದೇಶ ಪ್ರವೇಶಿಸಿದ್ದಲ್ಲದೆ ಅಲ್ಲಿ ಕುಳ್ಳರಿಸಲಾಗಿದ್ದ ಓರ್ವ ಆರೋಪಿಯ ಕೈಲಿದ್ದ ನೀರಿನ ಬಾಟಲ್ ಕಿತ್ತುಕೊಂಡು ಎಸೆದಿದ್ದಾರೆ.
ಇದನ್ನು ಪ್ರಶ್ನಿಸಿದ ಪೇದೆ ಸಂತೋಷ್‍ಗೆ ಕಪಾಳ ಮೋಕ್ಷ ಮಾಡಿದ್ದು, ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಲ್ಲದೆ ಕೊಲೆ ಬೆದರಿಕೆ ಕೂಡ ಹಾಕಿದ್ದಾರೆ. ಈ ಹಿನ್ನೆಲೆಯಲ್ಲಿ ಶಾಸಕರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

Leave a Reply

Your email address will not be published.

Social Media Auto Publish Powered By : XYZScripts.com