WATCH : ಗಡ್ಡಕ್ಕೆ ಇನ್ಶುರೆನ್ಸ್ ಮಾಡಿಸಿದ್ರಾ ಕೊಹ್ಲಿ.? : ಕ್ಯಾಪ್ಟನ್ ಸೀಕ್ರೆಟ್ ಬಯಲು ಮಾಡಿದ ರಾಹುಲ್..!

ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಕ್ರಿಕೆಟ್ ಮೈದಾನದಲ್ಲಿ ರನ್ ಗಳಿಸಿ, ದಾಖಲೆ ಸೃಷ್ಟಿಸುವುದಕ್ಕೆ ಫೇಮಸ್.. ಮೈದಾನದ ಹೊರಗೆ ತಮ್ಮ ಸ್ಟೈಲಿಷ್ ಲುಕ್, ಫ್ಯಾಷನ್ ಡ್ರೆಸಿಂಗ್ ಸೆನ್ಸ್ ನಿಂದಾಗಿಯೂ ವಿರಾಟ್ ಗಮನ ಸೆಳೆಯುತ್ತಾರೆ. ವಿರಾಟ್ ಕೊಹ್ಲಿ ತಮ್ಮ ಗಡ್ಡವನ್ನು ಶೇವ್ ಮಾಡಲು ಇಷ್ಟ ಪಡುವುದಿಲ್ಲವೆಂಬುದು ಅಭಿಮಾನಿಗಳೆಲ್ಲರಿಗೆ ತಿಳಿದ ಸಂಗತಿ.

ಆರಂಭಿಕ ಬ್ಯಾಟ್ಸಮನ್ ಕೆ ಎಲ್ ರಾಹುಲ್, ಕ್ಯಾಪ್ಟನ್ ಕೊಹ್ಲಿಯ ಗಡ್ಡದ ಕುರಿತಂತೆ ಸೀಕ್ರೆಟ್ ಒಂದನ್ನು ಬಯಲು ಮಾಡಿದ್ದಾರೆ. ರಾಹುಲ್ ಸಾಮಾಜಿಕ ಜಾಲತಾಣ ಟ್ವಿಟರಿನಲ್ಲಿ ಸೀಕ್ರೆಟ್ ವಿಡಿಯೋ ಒಂದನ್ನು ಪೋಸ್ಟ್ ಮಾಡಿದ್ದಾರೆ. ಹಿಡನ್ ಕ್ಯಾಮೆರಾದಲ್ಲಿ ಚಿತ್ರೀಕರಿಸಲಾಗಿರುವ ಈ ವಿಡಿಯೋದಲ್ಲಿ ಕೊಹ್ಲಿ ಗಡ್ಡದ ಚಿತ್ರಗಳನ್ನು ಕ್ಲಿಕ್ಕಿಸಿಕೊಳ್ಳುತ್ತಿರುವಂತೆಯೂ, ಇನ್ಶೂರೆನ್ಸ್ ಕಡತಗಳಿಗೆ ಸಹಿ ಮಾಡುತ್ತಿರುವಂತೆಯೂ ಮೇಲ್ನೋಟಕ್ಕೆ ಕಂಡು ಬರುತ್ತದೆ.

‘ ವಿರಾಟ್, ನೀವು ನಿಮ್ಮ ಗಡ್ಡವನ್ನು ಬಹಳ ಇಷ್ಟ ಪಡುತ್ತೀರೆಂದು ನನಗೆ ಗೊತ್ತು. ಇದೀಗ ಗಡ್ಡಕ್ಕೆ ಇನ್ಶೂರೆನ್ಸ್ ಕೂಡ ಮಾಡಿಸಿರುವ ಸುದ್ದಿಯಿಂದ ನನ್ನ ಮಾತು ನಿಜವೆಂದು ಸಾಬೀತಾಗಿದೆ ‘ ಎಂದು ರಾಹುಲ್ ಟ್ವೀಟ್ ಮಾಡಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com