Women’s Asia Cup : ಪಾಕ್ ವಿರುದ್ಧ 7 ವಿಕೆಟ್ ಗೆಲುವು : ಫೈನಲ್‍ಗೆ ಭಾರತ

ಕೌಲಾಲಂಪುರದ ಕಿನಾರಾ ಅಕಾಡೆಮಿ ಓವಲ್ ನಲ್ಲಿ ಶುಕ್ರವಾರ ನಡೆದ ಏಷ್ಯಾಕಪ್ ಟೂರ್ನಿಯ ಟಿ-20 ಪಂದ್ಯದಲ್ಲಿ ಪಾಕಿಸ್ತಾನದ ವಿರುದ್ಧ ಭಾರತ ವನಿತೆಯರ ತಂಡ 7 ವಿಕೆಟ್ ಗಳಿಂದ ಜಯ ಸಾಧಿಸಿದೆ. ಇದರೊಂದಿಗೆ ಹರ್ಮನ್ ಪ್ರೀತ್ ನೇತೃತ್ವದ ಟೀಮ್ ಇಂಡಿಯಾ ಏಷ್ಯಾಕಪ್ ಫೈನಲ್ ಗೆ ಲಗ್ಗೆಯಿಟ್ಟಿದೆ.

ಟಾಸ್ ಗೆದ್ದ ಪಾಕಿಸ್ತಾನ 20 ಓವರುಗಳಲ್ಲಿ 7 ವಿಕೆಟ್ ನಷ್ಟಕ್ಕೆ 72 ರನ್ ಮೊತ್ತ ಕಲೆಹಾಕಿತು. ಪಾಕಿಸ್ತಾನದ ಪರವಾಗಿ ಸನಾ ಮೀರ್ 20 ಹಾಗೂ ನಾಹಿದಾ ಖಾನ್ 18 ರನ್ ಗಳಿಸಿದರು. ಭಾರತದ ಪರವಾಗಿ ಏಕ್ತಾ ಬಿಷ್ತ್ ಮೂರು ವಿಕೆಟ್ ಪಡೆದರು.

ಗುರಿಯನ್ನು ಬೆನ್ನತ್ತಿದ ಭಾರತ 16.1 ಓವರ್ಗಳಲ್ಲಿ 3 ವಿಕೆಟ್ ಕಳೆದುಕೊಂಡು 75 ರನ್ ಗಳಿಸಿ ಗೆಲುವನ್ನು ತನ್ನದಾಗಿಸಿಕೊಂಡಿತು. ಆರಂಭಿಕ ಆಟಗಾರ್ತಿ ಸ್ಮೃತಿ ಮಂದಾನಾ 38 ಹಾಗೂ ನಾಯಕಿ ಹರ್ಮನ್ ಪ್ರೀತ್ ಕೌರ್ ಅಜೇಯ 34 ರನ್ ಗಳಿಸಿದರು.

Leave a Reply

Your email address will not be published.

Social Media Auto Publish Powered By : XYZScripts.com