ಮಕ್ಕಳ ಕಳ್ಳರ ವದಂತಿ ಹಿನ್ನೆಲೆ : ಉದ್ದಿನ ಬೇಳೆ ಮಾರಾಟ ಮಾಡಲು ಬಂದವನಿಗೆ ಥಳಿತ

ಹಾವೇರಿ : ರಾಜ್ಯದಲ್ಲಿ ಮಕ್ಕಳ ಕಳ್ಳರ ಹಾವಳಿ ಹೆಚ್ಚಾಗಿದೆ. ಮಕ್ಕಳನ್ನು ಕದ್ದೊಯ್ಯುತ್ತಿದ್ದಾರೆ ಎಂಬ ವದಂತಿ ಹೆಚ್ಚುತ್ತಿದ್ದು, ಈ ವದಂತಿಗೆ ಅನೇಕ ಅಮಾಯಕರು ಬಲಿಯಾಗುತ್ತಿದ್ದಾರೆ. ಈಗ ಇಂತಹ ವದಂತಿಗೆ ಮತ್ತೊಬ್ಬ ಅಮಾಯಕ ಬಲಿಯಾಗಿರುವ ಘಟನೆ ಹಾವೇರಿ ತಾಲ್ಲೂಕಿನ ಗೌರಾಪುರದಲ್ಲಿ  ನಡೆದಿದೆ.

ಗೌರಾಪುರಕ್ಕೆ ಉದ್ದಿನ ಬೇಳೆ ಮಾರುವ ಸಲುವಾಗಿ ವ್ಯಕ್ತಿಯೊಬ್ಬ ಬಂದಿದ್ದ. ಈತನನ್ನು ಮಕ್ಕಳ ಕಳ್ಳನೆಂದು ಭಾವಿಸಿ ಗ್ರಾಮಸ್ಥರು ಆತನಿಗೆ ಥಳಿಸಿದ್ದಾರೆ. ಇದುವರೆಗೂ ಯುವಕನ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಆದರೆ ಯುವಕ ಉದ್ದಿನಬೇಳೆ ಮಾರಾಟಕ್ಕೆಂದು ಗ್ರಾಮಕ್ಕೆ ಬಂದಿದ್ದ. ಅಲ್ಲದೆ ಆತನಿಗೆ ಕನ್ನಡ ಭಾಷೆ ಬರದ ಹಿನ್ನೆಲೆಯಲ್ಲಿ ಗ್ರಾಮಸ್ಥರು ಮಕ್ಕಳ ಕಳ್ಳರೆಂದು ಶಂಕಿಸಿ ಆತನ ಮೇಲೆ ಹಲ್ಲೆ ಮಾಡಿದ್ದಾರೆ.

ವಿಚಾರಣೆ ಬಳಿಕ ಯುವಕ ಮಕ್ಕಳ ಕಳ್ಳನಲ್ಲ ಎನ್ನುವುದು ತಿಳಿದು ಆತನನ್ನು ಕೈಬಿಟ್ಟು ಕಳಿಸಿದ್ದಾರೆ. ಉದ್ದಿನ ಬೇಳೆ ಚೀಲದಲ್ಲಿ ಮಕ್ಕಳ ಬಟ್ಟೆ ಸಿಕ್ಕಿದ್ದೇ ಶಂಕೆಗೆ ಕಾರಣವಾಗಿದೆ. ಹಾವೇರಿ ಗ್ರಾಮೀಣ  ಪೊಲೀಸ್ ಠಾಣೆಯಲ್ಲಿ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

Leave a Reply

Your email address will not be published.