ಕೈ ಕಾರ್ಯಕರ್ತನ ಮೇಲೆ ಬಿಜೆಪಿಗರಿಂದ ಹಲ್ಲೆ : ಭುಗಿಲೆದ್ದ ಆಕ್ರೋಶ

ಕಲಬುರಗಿ: ಕಾಂಗ್ರೆಸ್‍ ಕಾಯ‍ಕರ್ತನ ಮೇಲೆ ಬಿಜೆಪಿ ಕಾರ್ಯಕರ್ತರು ಹಲ್ಲೆ ಮಾಡಿದ ಘಟನೆ ಕಲಬುರಗಿಯ ಆಳಂಬ ತಾಲೂಕಿನ ತಡಕಲ್‍ ಗ್ರಾಮದಲ್ಲಿ ನಡೆದಿದೆ.

ಹಲ್ಲೆಗೊಳಗಾದ ಕೈ ಕಾರ್ಯಕರ್ತನನ್ನು ಮಹೇಶ್‌ ಎಂದು ಹೆಸರಿಸಲಾಗಿದೆ. ಮಹೇಶ್‌ ತೀವ್ರವಾಗಿ ಗಾಯಾಗೊಂಡಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ. ರಾಜಕೀಯ ದ್ವೇಷದಿಂದ ಹಲ್ಲೆ ಮಾಡಲಾಗಿದೆ ಎಂದು ಕಾಂಗ್ರೆಸ್‍ ನಾಯಕ ಚಂದ್ರಶೇಖರ್ ಹಿರೇಮಠ ಹಾಗೂ ಗಾಯಾಳು ಮಹೇಶ್‌ ಆರೋಪಿಸಿದ್ದಾರೆ. ಹಲ್ಲೆ ನಡೆಸಿದ ಬಿಜೆಪಿಗರ ವಿರುದ್ಧ ಎಲ್ಲೆಡೆ ಆಕ್ರೋಶ ವ್ಯಕ್ತವಾಗುತ್ತಿದೆ.

ಈ ಘಟನೆಗೆ ಸಂಬಂಧ ಪಟ್ಟಂತೆ ಆಳಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಳೆದ ಹತ್ತು ದಿನಗಳ ಹಿಂದೆ ಇಬ್ಬರು ಕಾಂಗ್ರೆಸ್ ಬೆಂಬಲಿಗರ ಮೇಲೆ ಹಲ್ಲೆ ನಡೆದಿತ್ತು ಎಂಬ ಸುದ್ದಿ ಕೇಳಿಬಂದಿತ್ತು.

 

 

 

Leave a Reply

Your email address will not be published.