ಫಿಫಾ ವಿಶ್ವಕಪ್ 2018 : ಯಾವ ತಂಡಕ್ಕೆ ಸೌರವ್ ಬೆಂಬಲ.? ದಾದಾ ಯಾವ ಆಟಗಾರನ ಅಭಿಮಾನಿ.?

ಜೂನ್ 14ರಿಂದ ರಷ್ಯಾದಲ್ಲಿ ನಡೆಯಲಿರುವ ಫಿಫಾ ವಿಶ್ವಕಪ್ – 2018 ಟೂರ್ನಿಗೆ ದಿನಗಣನೆ ಆರಂಭಗೊಂಡಿದ್ದು, ಅಭಿಮಾನಿಗಳಲ್ಲಿ ಕಾತರ ಹೆಚ್ಚಾಗುತ್ತಿದೆ. ಇದಕ್ಕೆ ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಸೌರವ್ ಗಂಗೂಲಿ ಕೂಡ ಹೊರತಾಗಿಲ್ಲ. ಶುಕ್ರವಾರ ಮಾಧ್ಯಮಗಳೆದುರು ಮಾತನಾಡಿರುವ ಸೌರವ್ ಗಂಗೂಲಿ, ಫಿಫಾ ವಿಶ್ವಕಪ್ ನಲ್ಲಿ  ತಾವು ಬೆಂಬಲಿಸುತ್ತಿರುವ ತಂಡ ಯಾವುದು..? ಮೆಚ್ಚಿನ ಆಟಗಾರ ಯಾರು..? ಎಂದು ಹೇಳಿದ್ದಾರೆ.

Image result for Messi sourav ganguly

‘ ಬ್ರೆಜಿಲ್ ನನ್ನ ಫೇವರಿಟ್ ತಂಡವಾಗಿದೆ, ಆದರೆ ನಾನು ಲಿಯೋನೆಲ್ ಮೆಸ್ಸಿ ಅಭಿಮಾನಿಯಾಗಿದ್ದೇನೆ. ಟೂರ್ನಿಯಲ್ಲಿ ಮೆಸ್ಸಿ ಮ್ಯಾಜಿಕ್ ಅನ್ನು ಇದಿರು ನೋಡುತ್ತಿದ್ದೇನೆ. ಮೆಸ್ಸಿ ಇನ್ನೂ ವಿಶ್ವಕಪ್ ಜಯಿಸುವುದು ಬಾಕಿಯಿದೆ. ಹಾಗಾಗಿ ಮೆಸ್ಸಿ ಪಾಲಿಗೆ ಇದು ಅತ್ಯಂತ ಮಹತ್ವದ ವಿಶ್ವಕಪ್ ಆಗಿದೆ ‘ ಎಂದು ಸೌರವ್ ಹೇಳಿದ್ದಾರೆ.

ಜಾಗತಿಕ ಫುಟ್ಬಾಲ್ ಸಮರದಲ್ಲಿ ಒಟ್ಟು 32 ತಂಡಗಳು ಭಾಗವಹಿಸಲಿವೆ. ಬ್ರೆಜಿಲ್, ಅರ್ಜೆಂಟೀನಾ ಹಾಗೂ ಜರ್ಮನಿ ಈ ಮೂರೂ ತಂಡಗಳೂ ಬಲಿಷ್ಠವಾಗಿವೆ ಎಂಸು ಗಂಗೂಲಿ ಅಭಿಪ್ರಾಯ ಪಟ್ಟಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com