ನಟಿ ಕತ್ರಿನಾ ಕೈಫ್‌ಗೆ ಬೆಂಗಳೂರಿನ ಅಕ್ಕಿರೊಟ್ಟಿ, ಫಿಲ್ಟರ್‌ ಕಾಫಿ ಅಂದ್ರೆ ತುಂಬಾ ಇಷ್ಟವಂತೆ !

ಖ್ಯಾತ ಬಾಲಿವುಡ್ ನಟಿ ಕತ್ರೀನಾ ಕೈಫ್ ತಮ್ಮ ಆಹಾರ ರಹಸ್ಯವನ್ನು #FlirtWithYourCity ಅಭಿಯಾನದೊಂದಿಗೆ ಹಂಚಿಕೊಂಡಿದ್ದಾರೆ.

ಬೆಂಗಳೂರು ನಿಜಕ್ಕೂ ಒಂದು ಪ್ರಾಯೋಗಿಕವಾದ ನಗರ. ಅತ್ಯುತ್ತಮವಾದ ಸ್ಥಳೀಯ ಆಹಾರದಿಂದ ಹಿಡಿದು ಭಿನ್ನ ವಿಭಿನ್ನ ಶೈಲಿಯ ಪಂಚತಾರಾ ಶೈಲಿಯ ಆಹಾರಗಳು ಕೂಡಾ ಇಲ್ಲಿ ಲಭ್ಯವಾಗುತ್ತದೆ. ಉತ್ತಮ ದೋಸೆ, ಅಕ್ಕಿರೊಟ್ಟಿ ಅಥವಾ ಜೋಳದ ರೊಟ್ಟಿಯೊಂದಿಗೆ ಫಿಲ್ಟರ್ ಕಾಫಿ ಸೇವನೆಯು ನನ್ನ ಇಷ್ಟದ ಆಹಾರವೆಂದು ನಟಿ ಕತ್ರಿನಾ ಕೈಫ್ ಹೇಳಿದ್ದಾರೆ.

ನನಗೆ ಬೀದಿಬದಿಯಲ್ಲಿ ಲಭ್ಯವಾಗುವ ಆಹಾರಗಳೆಂದರೆ ಇಷ್ಟ. ಸ್ಥಳೀಯ ಬೀದಿ ಅಂಗಡಿಗಳಲ್ಲಿ ಲಭ್ಯವಾಗುವ ತಿನಿಸುಗಳನ್ನು ಯಾವ ಪ್ರಮಾಣದಲ್ಲಾದರೂ ನಾನು ತಿನ್ನಲು ಸಿದ್ಧ. ಬೆಂಗಳೂರಿನ ವಿವಿಪುರಂ ನಲ್ಲಿರುವ ಬೀದಿ ಆಹಾರ ಮಳಿಗೆಗಳಲ್ಲಿ ತಿಂಡಿ ತಿನ್ನಲು ನಾನು ಉತ್ಸುಕಳಾಗಿರುತ್ತೇನೆ ಎಂದು ತಮ್ಮ ಇಷ್ಟದ ಆಹಾರ ಮಳಿಗೆಯ ಕುರಿತು ತಿಳಿಸಿದ್ದಾರೆ.

ಬೆಂಗಳೂರು ತನ್ನ ಹಸಿರಿನಿಂದಲೇ ಹೆಸರಾಗಿದೆ. ಬೆಂಗಳೂರಿನಲ್ಲಿ ಹಸಿರನ್ನು ನಾಶ ಮಾಡಲಾಗುತ್ತಿದೆ ಎಂಬ ಮಾತುಗಳು ಕೆಲವೊಮ್ಮೆ ಕೇಳಿ ಬರುತ್ತದೆ. ಆದರೆ  ಇಂದಿಗೂ ಲಾಲ್ ಬಾಗ್ ಹಾಗು ಕಬ್ಬನ್ ಪಾರ್ಕ್‍ನಂತಹ ಹಸಿರಿನ ಲೋಕವನ್ನೇ ತನ್ನೊಳಗೆ ಇಟ್ಟುಕೊಂಡಿದೆ. ಈ ಸ್ಥಳಗಳಲ್ಲಿ ಜಾಗಿಂಗ್ ಹಾಗೂ ಯೋಗ ಮಾಡಲು ಸೂಕ್ತ ಎಂದಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com