ಧರ್ಮಸ್ಥಳದ ಆಡಳಿತವನ್ನು ಹೊಗಳಿದ ಸುಪ್ರೀಂಕೋರ್ಟ್‌ : ಪುರಿ ಜಗನ್ನಾಥ ದೇಗುಲಕ್ಕೆ ತರಾಟೆ

ದೆಹಲಿ : ದೇವಸ್ಥಾನದ ನಿರ್ವಹಣೆಯನ್ನು  ಹೇಗೆ ಮಾಡಬೇಕು ಎಂಬುದನ್ನು ಕರ್ನಾಟಕದ ಧರ್ಮಸ್ಥಳವನ್ನು ನೋಡಿ ಕಲಿಯಿರಿ ಎಂದು  ಓಡಿಶಾದ ಪುರಿ ಜಗನ್ನಾಥ ದೇಗುಲ ಆಡಳಿತ ಮಂಡಳಿಯನ್ನು ಸುಪ್ರೀಂಕೋರ್ಟ್‌ ತರಾಟೆಗೆ ತೆಗೆದುಕೊಂಡಿದೆ.
ದೇವಾಲಯದಲ್ಲಿ ಭಕ್ತರ ಶೋಷಣೆ ನಡೆಯುತ್ತಿದ್ದು,. ಇದನ್ನು ಗಂಭೀರವಾಗಿ ಪರಿಗಣಿಸಿರುವ ನ್ಯಾ.ಆದರ್ಶ್ ಗೋಯಲ್ ಮತ್ತು ನ್ಯಾ.ಆಶೋಕ್ ಭೂಷಣ್ ಅವರಿದ್ದ ಪೀಠ ದೇಗುಲ ನಿರ್ವಹಣೆಗೆ ಸಂಬಂಧಿಸಿದಂತೆ ಪುರಿ ಜಗನ್ನಾಥ ದೇಗುಲ ಆಡಳಿತ ಮಂಡಳಿಗೆ ಹಲವು ನಿರ್ದೇಶನಗಳನ್ನು ನೀಡಿದೆ.
 
ಕರ್ನಾಟಕದ ಧರ್ಮಸ್ಥಳ ದೇವಸ್ಥಾನ ಸೇರಿದಂತೆ ಜಮ್ಮು ಮತ್ತು ಕಾಶ್ಮೀರದ ವೈಷ್ಣೋದೇವಿ, ಆಂಧ್ರಪ್ರದೇಶದ ತಿರುಪತಿ ದೇವಸ್ಥಾನದ ನಿರ್ವಹಣೆ ವ್ಯವಸ್ಥೆಯನ್ನು ಅಧ್ಯಯನ ನಡೆಸುವಂತೆ ಒಡಿಶಾ ಸರ್ಕಾರಕ್ಕೆ ನ್ಯಾಯಾಲಯ  ಆದೇಶ ನೀಡಿದೆ. ಮುಂದಿನ ತಿಂಗಳು ನಡೆಯಲಿರುವ ವಾರ್ಷಿಕ ರಥಯಾತ್ರೆಗೂ ಮುನ್ನ ನ್ಯಾಯಾಲಯ ನಿರ್ದೇಶನ ನೀಡಿರುವ ಹಿನ್ನಲೆಯಲ್ಲಿ ಈ ಆದೇಶ ಮಹತ್ವ ಪಡೆದಿದೆ.
ಪುರಿ ಜಗನ್ನಾಥ ದೇವಸ್ಥಾನದ ಸಿಬ್ಬಂದಿಯಿಂದ ಭಕ್ತರ ಶೋಷಣೆ ನಡೆಯುತ್ತಿರುವುದರ ಬಗ್ಗೆ ಗಮನ ಸೆಳೆದ ಮೃಣಾಲಿನಿ ಎಂಬ ಭಕ್ತೆ  ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿದಂತೆ ನ್ಯಾಯಾಲಯ ಈ ತೀರ್ಪು ನೀಡಿದೆ.

Leave a Reply

Your email address will not be published.

Social Media Auto Publish Powered By : XYZScripts.com