ದಕ್ಷಿಣ ಕನ್ನಡ : ಶಾಲೆಯಲ್ಲಿ ಒಂದು ಧರ್ಮಕ್ಕೆ ಸೀಮಿತವಾದ ಪ್ರಾರ್ಥನೆ : ಪೋಷಕರ ವಿರೋಧ

ಶಾಲೆ ಅಂದರೆ ಅಲ್ಲಿ ಎಲ್ಲಾ ಧರ್ಮ ಸಂಸ್ಕೃತಿಯ ಮಕ್ಕಳಿರುತ್ತಾರೆ. ಒಂದು ಧರ್ಮಕ್ಕೆ ಸೀಮಿತವಾದ ಆಚರಣೆ ಪ್ರಾರ್ಥನೆ ಮಾಡುವುದು ಸರಿಯಲ್ಲ. ಅದರಲ್ಲೂ ಸರ್ಕಾರಿ ಅನುದಾನಿತ ಶಾಲೆಗಳಲ್ಲಿ ಇಂತಹದ್ದು ಕಂಡು ಬಂದರೆ ಅದು ತಪ್ಪಾಗುತ್ತದೆ.

ಆದರೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಪಂಚದುರ್ಗ ಪ್ರೌಢ ಶಾಲೆ ಕಕ್ಕೆಪದವಿನಲ್ಲಿ ಒಂದು ಧರ್ಮಕ್ಕೆ ಸೀಮಿತವಾದ ದೇವರ ಪ್ರಾರ್ಥನೆಯನ್ನು ಮಾಡ್ತಾ ಇರೋದು ಒಂದು ವರ್ಗದ  ಪೋಷಕರ ಹಾಗೂ ಸ್ಥಳೀಯರ ವಿರೋಧಕ್ಕೆ ಕಾರಣವಾಗಿದೆ. ಶಾಲೆಯಲ್ಲಿ ಪ್ರತಿ ಗುರುವಾರ ಸಾಯಿ ಬಾಬಾ ಭಜನೆ ಹಾಗೂ ಸೂರ್ಯ ನಮಸ್ಕಾರಗಳನ್ನು ಮಾಡುತ್ತ ಬರಲಾಗುತ್ತಿದೆ.

ಕಡ್ಡಾಯವಿಲ್ಲ ಅಂತಿದ್ರೂ ಇತರ ಧರ್ಮದ ಮಕ್ಕಳಿಗೂ ಪ್ರಾರ್ಥನೆಗಳಲ್ಲಿ ಭಾಗವಹಿಸೋದು ಅನಿವಾರ್ಯವಾಗಿದೆ. ಅದರಲ್ಲಿಯೂ, ಸರ್ಕಾರಿ ಅನುದಾನಿತ ಈ ಶಾಲೆಯಲ್ಲಿ ಎಲ್ಲಾ ಧರ್ಮ ಮತ ಆಚರಣೆಯ ಮಕ್ಕಳಿರುವಾಗ ಕೇವಲ ಒಂದು ಧರ್ಮಕ್ಕೆ ಸೇರಿದ ಆಚರಣೆಯನ್ನು ಅನುಸರಿಸುವುದು ಎಷ್ಟರ ಮಟ್ಟಿಗೆ ಸರಿ ಎಂಬ ಪ್ರಶ್ನೆ ಉದ್ಭವವಾಗಿದೆ.

Leave a Reply

Your email address will not be published.

Social Media Auto Publish Powered By : XYZScripts.com