ಅಪೌಷ್ಠಿಕ ಮಕ್ಕಳನ್ನು ಬಳಸಿಕೊಂಡು ಭಿಕ್ಷಾಟನೆ : ದಿನಕ್ಕೆ ಸಾವಿರ ಸಾವಿರ ಸಂಪಾದನೆ…!

ಕಲಬುರಗಿ : ಅಪೌಷ್ಟಿಕ ಮಕ್ಕಳನ್ನು ಭಿಕ್ಷಾಟನೆಗೆ ಕಳಿಸಿ ದಿನಕ್ಕೆ ಸಾವಿರಾರು ರೂ ಹಣ ಸಂಪಾದನೆ ಮಾಡುತ್ತಿರುವ ಜಾಲವೊಂದು ಕಲಬುರಗಿಯಲ್ಲಿ  ಬೆಳಕಿಗೆ ಬಂದಿದ್ದು, ಸದ್ಯ ಆರೋಪಿಗಳು ಪೊಲೀಸರ ಬಲೆಗೆ ಬಿದ್ದಿದ್ದಾರೆ.

ಕಲಬುರಗಿ ಡಾನ್ ಬಾಸ್ಕೋ ಸಂಸ್ಥೆ ಕಾರ್ಯಾಚರಣೆ ಮೂಲಕ ಈ ಘಟನೆ ಬೆಳಕಿಗೆ ಬಂದಿದೆ. ಇದಕ್ಕೆ ಸಂಬಂಧ ಪಟ್ಟ ಉತ್ತರ ಪ್ರದೇಶ ಮೂಲದವರಾದ ರೂಬಿ ಮತ್ತು ರೈಸಾ ಬೇಗಂ ಹೆಸರಿನ ಇಬ್ಬರು ಮಹಿಳೆಯರನ್ನು ಬಂಧಿಸಿದ್ದು, ಆರ್ ಜೆ ನಗರ ಪೋಲಿಸರು ಈ ಕುರಿತು ತನಿಖೆ ನಡೆಸುತ್ತಿದ್ದಾರೆ.

ಆರೋಪಿಗಳು ಅಪೌಷ್ಠಿಕ ಮಕ್ಕಳನ್ನು ಬಳಸಿಕೊಂಡು ದಿನಕ್ಕೆ ನಾಲ್ಕೈದು ಸಾವಿರ ಸಂಪಾದನೆ ಮಾಡುತ್ತಿದ್ದರು. ಆ ಮಕ್ಕಳು ಯಾರದ್ದು ಅನ್ನೂ ಬಗ್ಗೆ ವಿಚಾರಣೆ ನಡೆಸಲಾಗುತ್ತಿದೆ. ಸದ್ಯ ಮಕ್ಕಳನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.  ಮಕ್ಕಳ ಸಹಾಯವಾಣಿಗೆ ಬಂದ ಕರೆಯಿಂದಾಗಿ ಈ ಕೇಸ್‍ ಬೆಳಕಿಗೆ ಬಂದಿದೆ.

 

 

Leave a Reply

Your email address will not be published.

Social Media Auto Publish Powered By : XYZScripts.com