ಖಾತೆ ಹಂಚಿಕೆ ಫೈನಲ್‌….ಯಾವ್ಯಾವ ಸಚಿವರಿಗೆ ಯಾವ್ಯಾವ ಖಾತೆ ಇಲ್ಲಿದೆ ಫುಲ್‌ ಡಿಟೇಲ್ಸ್‌…

ಬೆಂಗಳೂರು : ಪ್ರಮಾಣ ವಚನ ಸ್ವೀಕರಿಸಿ ಸಚಿವ ಸ್ಥಾನ ಗಿಟ್ಟಿಸಿಕೊಂಡಿದ್ದವರಿಗೆ ಖಾತೆ ಹಂಚಿಕೆ ಮಾಡಲಾಗಿದೆ. ಇಷ್ಟು ದಿನ ಇಂಧನ ಖಾತೆಗಾಗಿ ಪಟ್ಟು ಹಿಡಿದಿದ್ದ ರೇವಣ್ಣ ಹಾಗೂ ಡಿಕೆಶಿ ಇಬ್ಬರಿಗೂ ಬಿಟ್ಟು ಸಿಎಂ ಕುಮಾರಸ್ವಾಮಿಯವರೇ ಇಂಧನ ಖಾತೆ ಇಟ್ಟುಕೊಂಡಿದ್ದಾರೆ.

ಒಬ್ಬರಿಗೆ ಖಾತೆ ನೀಡಿದರೆ ಇನ್ನೊಬ್ಬರಿಗೆ ಅಸಮಾಧಾನವಾಗುತ್ತದೆ ಎಂಬ ಕಾರಣದಿಂದ ಕುಮಾರಸ್ವಾಮಿಯವರೇ ಇಂಧನ ಖಾತೆಯನ್ನು ತಮ್ಮ ಬಳಿ ಇರಿಸಿಕೊಂಡಿರುವುದಾಗಿ ತಿಳಿದುಬಂದಿದೆ.

ಯಾವ್ಯಾವ ಸಚಿವರಿಗೆ ಯಾವ್ಯಾವ ಖಾತೆ ಎಂಬುದರ ಫುಲ್‌ ಡಿಟೇಲ್ಸ್ ಇಲ್ಲಿದೆ.

ಎಚ್‌ಡಿ ಕುಮಾರಸ್ವಾಮಿ – ಹಣಕಾಸು/ ಇಂಧನ / ಗುಪ್ತವಾರ್ತೆ / ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಖಾತೆ.

ಪರಮೇಶ್ವರ್ – ಗೃಹ / ಬೆಂಗಳೂರು ನಗರಾಭಿವೃದ್ಧಿ.

ಎಚ್‌ಡಿ ರೇವಣ್ಣ – ಲೋಕೋಪಯೋಗಿ.

ಆರ್‌ವಿ ದೇಶಪಾಂಡೆ – ಕಂದಾಯ.

ಡಿಕೆ ಶಿವಕುಮಾರ್ – ಜಲಸಂಪನ್ಮೂಲ / ವೈದ್ಯಕೀಯ ಶಿಕ್ಷಣ.

ಕೆಜೆ ಜಾರ್ಜ್ – ಬೃಹತ್ ಕೈಗಾರಿಕೆ .

ಬಂಡೆಪ್ಪ ಕಾಶಂಪುರ್ – ಸಹಕಾರ.

ಕೃಷ್ಣಬೈರೇಗೌಡ – ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ / ಕಾನೂನು ಮತ್ತು ಸಂಸದೀಯ ವ್ಯವಹಾರ.

ಯುಟಿ ಖಾದರ್ – ನಗರಾಭಿವೃದ್ಧಿ / ವಸತಿ.

ಸಿಎಸ್ ಪುಟ್ಟರಾಜು – ಸಣ್ಣ ನೀರಾವರಿ.

ಶಿವಶಂಕರ್ ರೆಡ್ಡಿ – ಕೃಷಿ.

ಪ್ರಿಯಾಂಕ್ ಖರ್ಗೆ – ಸಮಾಜ ಕಲ್ಯಾಣ.

ಜಮೀರ್ ಅಹಮದ್ – ಆಹಾರ ಮತ್ತ ನಾಗರೀಕ ಪೂರೈಕೆ / ಅಲ್ಪಸಂಖ್ಯಾತ ಕಲ್ಯಾಣ.

ಶಿವಾನಂದ ಪಾಟೀಲ್ – ಆರೋಗ್ಯ.

ವೆಂಕಟರಮಣಪ್ಪ – ಕಾರ್ಮಿಕ.

ರಾಜಶೇಖರ್ ಪಾಟೀಲ್ – ಗಣಿ ಮತ್ತು ಭೂವಿಜ್ಞಾನ.

ಪುಟ್ಟರಂಗಶೆಟ್ಟಿ – ಹಿಂದುಳಿದ ವರ್ಗಗಳ ಕಲ್ಯಾಣ.

ಶಂಕರ್ – ಅರಣ್ಯ.

ಜಯಮಾಲ – ಮಹಿಳಾ ಮತ್ತು ಮಕ್ಕಳ ಕಲ್ಯಾಣ.

ರಮೇಶ್ ಜಾರಕಿಹೊಳಿ – ಪೌರಾಡಳಿತ ಮತ್ತು ಯುವಜನ ಮತ್ತು ಕ್ರೀಡೆ.

ಜಿಟಿ ದೇವೇಗೌಡ – ಉನ್ನತ ಶಿಕ್ಷಣ.

ಸಾರಾ ಮಹೇಶ್ – ಪ್ರವಾಸೋದ್ಯಮ.

ಎನ್ ಮಹೇಶ್ – ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ.

ಡಿಸಿ ತಮ್ಮಣ್ಣ – ಸಾರಿಗೆ.

Leave a Reply

Your email address will not be published.

Social Media Auto Publish Powered By : XYZScripts.com