ಚುರುಕುಗೊಂಡ ಮುಂಗಾರು : ಇನ್ನೆರಡು ದಿನ ಕರಾವಳಿಯಲ್ಲಿ ಗಾಳಿ ಸಹಿತ ಭಾರೀ ಮಳೆ ಸಾಧ್ಯತೆ

ಬೆಂಗಳೂರು : ಮುಂಗಾರು ಮಾರುತಗಳು ಈ ಬಾರಿ ಚುರುಕಾಗಿದ್ದು ಎಲ್ಲೆಡೆ ಉತ್ತಮ ಮಳೆಯಾಗುತ್ತಿದೆ. ರಾಜ್ಯ ಕರಾವಳಿಯಲ್ಲಿ ಎರಡು ದಿನ 40ರಿಂದ 50 ಕಿ.ಮೀ ವೇಗದಲ್ಲಿ ಬೀಸುವ ಗಾಳಿಯೊಂದಿಗೆ ಭಾರಿ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ.


ಜಿಲ್ಲೆಯಾದ್ಯಂತ ಗುರುವಾರ ತಡರಾತ್ರಿ ಮತ್ತು ಶುಕ್ರವಾರ ದಿನವಿಡಿ ಮಳೆಯಾಗಿದ್ದು, ಭಟ್ಕಳ ತಾಲೂಕಿನಲ್ಲಿ 75.4ಮೀ.ಮಿಟರ್, ಅಂಕೋಲಾ ತಾಲೂಕಿನಲ್ಲಿ 51 ಮೀ.ಮೀಟರ್, ಶಿರಸಿ ತಾಲೂಕಿನಲ್ಲಿ 20 ಮೀ.ಮೀಟರ್ ಮಳೆಯಾದ ವರದಿಯಾಗಿದೆ. ನಗರದಲ್ಲಿ ಬಿಟ್ಟುಬಿಡದೇ ಮಳೆ ಬರುತ್ತಿರುವುದರಿಂದಾಗಿ ವಾತಾವರಣ ತಂಪಾಗಿದ್ದು ಸೆಕೆಯಿಂದ ಒದ್ದಾಡುತ್ತಿದ್ದ ಜನತೆ ಸ್ವಲ್ಪ ನಿರಾಳರಾಗಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com