ಕಮ್ಯುನಿಷ್ಟರು ದೇಶಪ್ರೇಮ ವಿಚಾರದಲ್ಲಿ ಕಮ್ಮಿನಿಷ್ಠರು : ಪ್ರತಾಪ್‌ ಸಿಂಹ ವಾಗ್ದಾಳಿ

ಬೆಂಗಳೂರು : ಕಮ್ಯುನಿಸ್ಟರು ದೇಶಪ್ರೇಮದಲ್ಲಿ ಕಮ್ಮಿನಿಷ್ಠರು ಎಂದು ಸಂಸದ ಪ್ರತಾಪ್ ಸಿಂಹ ಹೇಳಿದ್ದಾರೆ.

ಬೆಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ನ ಡೆದ ರಾಜ್ಯ ಬಿಜೆಪಿ ಯುವ ಮೋರ್ಚಾ ಸಭೆಯಲ್ಲಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿಯವರನ್ನು ಮಾವೋವಾದಿಗಳು ಹತ್ಯೆ ಮಾಡುವ ಸಂಚು ರೂಪಿಸಿದ ವಿಚಾರ ಸಂಬಂಧ ಮಾತನಾಡಿದ್ದು, ಸ್ವಾತಂತ್ರ್ಯ ಪೂರ್ವದಲ್ಲಿ ಬ್ರಿಟಿಷರ ಜೊತೆಯೂ ಸ್ವಾತಂತ್ರ್ಯಾನಂತರ ಚೀನಾ ಜೊತೆಯೂ ಕಮ್ಯೂನಿಷ್ಟರು ಕೈಜೋಡಿಸಿದ್ದವರು. ಇಂಥ ಕಮ್ಮಿನಿಷ್ಟರಿಂದ ಪ್ರಧಾನಿ ಹತ್ಯೆಗೆ ಸಂಚು ರೂಪಿಸುವುದು ಬಿಟ್ಟು ಮತ್ತಿನ್ನೆಂತಹ ರಾಷ್ಟ್ರಪ್ರೇಮ ನಿರೀಕ್ಷೆ ಮಾಡಲು ಸಾಧ್ಯ ಎಂದಿದ್ದಾರೆ.

ಅಷ್ಟೇ ಅಲ್ಲದೆ ಇಂತಹವರಿಗೆ ತಕ್ಕ ಪಾಠ ಕಲಿಸಬೇಕು. ಮೋದಿಯಂತಹ ದೇಶಭಕ್ತರನ್ನೇ ಕೊಲ್ಲಲು ಹೊರಟವರು ದೇಶಪ್ರೇಮ ಇಲ್ಲದವರು ಎಂದು ಆರೋಪಿಸಿದ್ದಾರೆ.

ನಿನ್ನೆಯಷ್ಟೇ ಪ್ರಧಾನಿ ಮೋದಿಯವರನ್ನು ಮಾಜಿ ಪ್ರಧಾನಿ ರಾಜೀವ್ ಗಾಂಧಿಯವರನ್ನು ಹತ್ಯೆ ಮಾಡಿದ್ದ ಮಾದರಿಯಲ್ಲೇ ಹತ್ಯೆ ಮಾಡಲು ಮಾವೋವಾದಿಗಳು ಸಂಚು ರೂಪಿಸಿರುವ ವಿಚಾರ ಬಯಲಿಗೆ ಬಂದಿತ್ತು. ಈ ಹಿನ್ನೆಲೆಯಲ್ಲಿ ಪ್ರತಾಪ್‌ ಸಿಂ ಹ ಕಮ್ಯುನಿಷ್ಟರ ಕುರಿತು ಈ ಹೇಳಿಕೆ ನೀಡಿದ್ದಾರೆ.

Leave a Reply

Your email address will not be published.