ರೈತ ಹೋರಾಟಕ್ಕೆ ಆರು ತಿಂಗಳು: ಮೇ 26ರಂದು ದೇಶಾದ್ಯಂತ ಕಪ್ಪು ದಿನ ಆಚರಣೆಗೆ ರೈತರ ಕರೆ!

ಕೇಂದ್ರ ಸರ್ಕಾರದ ಮೂರು ಕೃಷಿ ಕಾಯ್ದೆಗಳ ವಿರುದ್ದ ರೈತರ ಹೋರಾಟ ಆರು ತಿಂಗಳುಗಳನ್ನು ಪೂರೈಸಿದೆ. ಕೊರೊನಾ ಎರಡನೇ ಅಲೆಯ ನಡುವೆಯೂ ಪಟ್ಟು ಬಿಡದೆ ದೆಹಲಿ ಗಡಿಯಲ್ಲಿ ಹೋರಾಟ ನಡೆಸುತ್ತಿರುವ ಪತ್ರಿಭಟನಾ ನಿರತ ರೈತರ ಬಗ್ಗೆ ಕಾಳಜಿವಹಿಸದ ಸರ್ಕಾರ, ರೈತರ ಬೇಡಿಕೆಗಳನ್ನು ಈಡೇರಿಸಲು ಹಿಂದೇಟು ಹಾಕುತ್ತಿದೆ. ಈ ಹಿನ್ನೆಲೆಯಲ್ಲಿ ಮೇ 26 ಅನ್ನು ‘ಕಪ್ಪು ದಿನ’ವನ್ನಾಗಿ ಆಚರಿಸಲು ನಿರ್ಧರಿಸಿರುವುದಾಗಿ ಸಂಯುಕ್ತ ಕಿಸಾನ್ ಮೋರ್ಚಾ(ಎಸ್‌ಕೆಎಂ) ತಿಳಿಸಿದೆ.

ಮೇ 26ರಂದು ರೈತರ ‍ಪ್ರತಿಭಟನೆಯು ಆರು ತಿಂಗಳು ಪೂರೈಸಲಿದೆ. ಅಂದು ದೇಶದ ಎಲ್ಲಾ ರೈತರು, ರೈತ ಬೆಂಬಲಿಗರು ತಮ್ಮ ಮನೆಗಳಲ್ಲಿ, ಅಂಗಡಿಗಳಲ್ಲಿ ಮತ್ತು ವಾಹನಗಳಲ್ಲಿ ಕಪ್ಪು ಬಾವುಟ ಹಾರಿಸುವ ಮೂಲಕ ವಿವಾದಾತ್ಮಕ ಕೃಷಿ ಕಾಯ್ದೆಗಳ ವಿರುದ್ಧ ಪ್ರತಿಭಟಿಸುವಂತೆ ಮನವಿ ಮಾಡುತ್ತೇವೆ ಎಂದು ರೈತ ನಾಯಕ ಬಲ್ಬೀರ್ ಸಿಂಗ್ ರಾಜೇವಾಲ್‌ ತಿಳಿಸಿದ್ದಾರೆ.

ಅಲ್ಲದೆ, ಇದೇ ದಿನದಂದು ಮೋದಿ ಸರ್ಕಾರವು ತನ್ನ ಏಳು ವರ್ಷಗಳನ್ನು ಕೂಡ ಪೂರ್ಣಗೊಳಿಸಲಿದೆ. ಈ ‘ಕಪ್ಪು ದಿನ’ದಂದು ಪ್ರಧಾನಿ ನರೇಂದ್ರ ಮೋದಿ ಅವರ ಪ್ರತಿಕೃತಿಯನ್ನು ದಹಿಸುವ ಮೂಲಕ ಪ್ರತಿಭಟನೆ ನಡೆಸಲಿದ್ದೇವೆ ಎಂದು ಅವರು ತಿಳಿಸಿದ್ದಾರೆ.

ಮೋದಿ ಸರ್ಕಾರವು ರೈತರ ಬೇಡಿಕೆಗಳನ್ನು ಕಿವಿಗೊಡುತ್ತಿಲ್ಲ. ಅಲ್ಲದೆ ರಸಗೊಬ್ಬರಗಳು, ಡೀಸೆಲ್ ಮತ್ತು ಪೆಟ್ರೋಲ್ ಬೆಲೆಗಳು ಹೆಚ್ಚಾಗಿರುವುದರಿಂದ ಕೃಷಿ ವ್ಯವಹಾರವು ಸಾಧ್ಯವಿಲ್ಲ ಎಂದು ಅವರು ಹೇಳಿದರು.

ಇದನ್ನೂ ಓದಿ: ಮಾಸ್ಕ್‌ 3 ರೂ, ಫೇಸ್‌ಶೀಲ್ಡ್‌ 21 ರೂ, ಗ್ಲೌಸ್‌ 5 ರೂ; ಅಗತ್ಯ ವಸ್ತುಗಳಿಗೆ ಕಡಿಮೆ ಬೆಲೆ ನಿಗದಿ ಮಾಡಿ ಮಾದರಿಯಾದ ಪಿಣರಾಯಿ ಸರ್ಕಾರ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

One thought on “ರೈತ ಹೋರಾಟಕ್ಕೆ ಆರು ತಿಂಗಳು: ಮೇ 26ರಂದು ದೇಶಾದ್ಯಂತ ಕಪ್ಪು ದಿನ ಆಚರಣೆಗೆ ರೈತರ ಕರೆ!

Leave a Reply

Your email address will not be published.

Verified by MonsterInsights