Shocking : ಮೈತ್ರಿ ಸರ್ಕಾರದ ಕುರಿತು ಹೊರಬಿದ್ದಿದೆ ಸ್ಫೋಟಕ ಸುದ್ದಿ…. ಏನದು?!

ಶಿವಮೊಗ್ಗ : ಮೈತ್ರಿ ಸರ್ಕಾರದ ಕುರಿತು ಬಿಜೆಪಿ ನಾಯಕ ಕೆ.ಎಸ್‌ ಈಶ್ವರಪ್ಪ ಹೊಸ ಬಾಂಬ್ ಸಿಡಿಸಿದ್ದಾರೆ. ಶಿವಮೊಗ್ಗದಲ್ಲಿ ಮಾತನಾಡಿದ ಅವರು ಅಪವಿತ್ರ ಮೈತ್ರಿ ಗೆ ಕಾಂಗ್ರೆಸ್ ಜೆಡಿಎಸ್ ಶಾಸಕರು ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಸಚಿವ ಸ್ಥಾನಕ್ಕೆ ಜಾತಿ ಲಾಭಿಯಿಂದ ಎರಡು ಪಕ್ಷದ ಶಾಸಕರಿಗೆ ಅಸಮಾಧಾನ ಹೆಚ್ಚಾಗಿದೆ‌.ಕುರುಬರಿಗಷ್ಟೇ ಅಲ್ಲ ಸಂಪುಟದಲ್ಲಿ ಯಾವ ಜಾತಿಯವರಿಗೆ ನ್ಯಾಯ ಸಿಕ್ಕಿದೆ ಹೇಳಿ ಎಂದು ಪ್ರಶ್ನಿಸಿದ್ದಾರೆ.

ರಾಜ್ಯದಲ್ಲಿ ಅಡಳಿತ ಸರಕಾರವೇ ಇಲ್ಲ. ಅಧಿಕಾರಿಗಳ ಸರಕಾರ ರಾಜ್ಯದಲ್ಲಿ ನಡೆಯುತ್ತಿದೆ. ಅತೃಪ್ತರ ಸರಕಾರ ಇದು. ತುಂಬಾ ದಿನ ಸರಕಾರ ಇರುವುದಿಲ್ಲ. ಹೆಚ್.ಎಂ.ರೇವಣ್ಣ ನಮ್ಮ ಪಕ್ಷಕ್ಕೆ ಬರುತ್ತಾರೆ.  ಜೊತೆಗೆ ಭಿನ್ನಮತೀಯ ಶಾಸಕರು ಸಂಪರ್ಕ ಮಾಡಿದ್ದಾರೆ. ಆದರೆ ಯಾರು ಅನ್ನೋದನ್ನ ಬಹಿರಂಗ ಪಡಿಸಲ್ಲ ಎಂದು ಈಶ್ವರಪ್ಪ ಹೊಸ ಬಾಂಬ್ ಸಿಡಿಸಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com