ಒಂದೇ ಗನ್‍ನಿಂದ ಎಮ್.ಎಮ್ ಕಲಬುರ್ಗಿ, ಗೌರಿ ಲಂಕೇಶ್ ಹತ್ಯೆ : ಫೋರೆನ್ಸಿಕ್ ವರದಿ

ಕನ್ನಡದ ಖ್ಯಾತ ಸಂಶೋಧಕ, ಸಾಹಿತಿ ಎಮ್.ಎಮ್ ಕಲಬುರ್ಗಿ ಹಾಗೂ ಪತ್ರಕರ್ತೆ ಗೌರಿ ಲಂಕೇಶ್ ಇಬ್ಬರ ಹತ್ಯೆಯೂ ಒಂದೇ ಗನ್ ನಿಂದ ನಡೆದಿದೆ ಎಂಬ ವರದಿಯನ್ನು ಕರ್ನಾಟಕ ವಿಧಿ ವಿಜ್ಞಾನ ಪ್ರಯೋಗಾಲಯದ ಹೊರಹಾಕಿದೆ. ಎರಡು ವರ್ಷಗಳ ಅಂತರದಲ್ಲಿ ನಡೆದಿದ್ದ ಕೊಲೆ ಪ್ರಕರಣಗಳ ನಡುವಿನ ಸಂಬಂಧದ ಕುರಿತಂತೆ ಹೊರ ಬಂದಿರುವ ಮೊದಲ ಅಧಿಕೃತ ವರದಿ ಇದಾಗಿದೆ.

‘ ಎರಡೂ ಕೊಲೆ ಪ್ರಕರಣಗಳಲ್ಲಿಯೂ 7.65 ಎಮ್ ಎಮ್ ಕ್ಯಾಲಿಬರ್ ಪಿಸ್ಟಲ್ ಕ್ಯಾಟ್ರಿಡ್ಜ್ ಗಳನ್ನು ಹೊಂದಿದ್ದ ಒಂದೇ ಕಂಟ್ರಿ ಗನ್ ನಿಂದ ಗುಂಡುಗಳನ್ನು ಹಾರಿಸಲಾಗಿದೆ ‘ ಎಂಬ ಮಾಹಿತಿ ಫೋರೆನ್ಸಿಕ್ ವರದಿಯಿಂದ ತಿಳಿದು ಬಂದಿದೆ.

ಸಂಶೋಧಕ ಎಮ್.ಎಮ್ ಕಲಬುರ್ಗಿ ಅವರನ್ನು 2015 ಆಗಸ್ಟ್ 30 ರಂದು ಧಾರವಾಡದ ಕಲ್ಯಾಣ ನಗರದಲ್ಲಿರುವ ಅವರ ನಿವಾಸದಲ್ಲಿ ಗುಂಡಿಟ್ಟು ಕೊಲ್ಲಲಾಗಿತ್ತು. ಸಾಮಾಜಿಕ ಹೋರಾಟಗಾರ್ತಿ ಹಾಗೂ ಪತ್ರಕರ್ತೆ ಗೌರಿ ಲಂಕೇಶ್ ಅವರನ್ನು 2017 ಸೆಪ್ಟೆಂಬರ್ 5 ರಂದು ಬೆಂಗಳೂರಿನ ನಿವಾಸದಲ್ಲಿ ಗುಂಡು ಹಾರಿಸಿ ಹತ್ಯೆಗೈಯಲಾಗಿತ್ತು.

 

Leave a Reply

Your email address will not be published.

Social Media Auto Publish Powered By : XYZScripts.com