ಮೋದಿಯನ್ನು ಕೊಂದು ದೇಶವಿಭಜನೆ ಮಾಡಿಯೇ ತೀರುತ್ತೇವೆ : ಉಗ್ರ ಹಫೀಜ್‌ ಸಯೀದ್‌

ದೆಹಲಿ : ಭಾರತದ ಪ್ರಧಾನಿ ಮೋದಿಯನ್ನು ಹತ್ಯೆ ಮಾಡಿ ದೇಶ ವಿಭಜನೆ ಮಾಡುತ್ತೇನೆ ಎಂದು ಜಮಾತ್‌ ಉದ್‌ ದಾವಾ ಸಂಘಟನೆಯ ಉಗ್ರ ಹಫೀಜ್‌ ಸಯೀದ್‌ ಹೇಳಿದ್ದಾನೆ.

ರಂಜಾನ್‌ ಪ್ರಯುಕ್ತ ಹಮ್ಮಿಕೊಳ್ಳಲಾಗಿದ್ದ ಸಾರ್ವಜನಿಕ ಸಮಾರಂಭದಲ್ಲಿ ಮಾತನಾಡಿದ್ದು, ಮೋದಿಯನ್ನು ಹತ್ಯೆ ಮಾಡಬೇಕು. ಭಾರತವನ್ನು ವಿಭಜನೆ ಮಾಡಬೇಕು. ಭಾರತ ಹಾಗೂ ಅಮೆರಿಕದಲ್ಲಿ ಇಸ್ಲಾಂ ಬಾವುಟ ಹಾರಿಸಿಯೇ ಸಿದ್ಧ ಎಂದಿದ್ದಾನೆ.

ಅಲ್ಲದೆ ಮೋದಿಯನ್ನು ಕೊಂದು ಭಾರತವನ್ನು ಚೂರು ಚೂರು ಮಾಡುವುದಾಗಿ ಸಂಘಟನೆಯ ಹಿರಿಯ ನಾಯಕ ಮೌಲಾನಾ ಬಶೀರ್‌ ಖಾಖಿ ಹೇಳಿದ್ದಾನೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಜೊತೆಗೆ ರಂಜಾನ್ ಪವಿತ್ರ ಮಾಸ. ಈ ಸಮಯದಲ್ಲಿ ಜಿಹಾದ್‌ ನಡೆಸಿದರೆ ಗೆಲುವು ನಮ್ಮದೇ. ಜಿಹಾದ್‌ನಲ್ಲಿ ಹುತಾತ್ಮರಾದರೆ ನಾವು ನೇರವಾಗಿ ಸ್ವರ್ಗಕ್ಕೆ ಹೋಗುತ್ತೇವೆ. ಕಾಶ್ಮೀರಕ್ಕಾಗಿ ಹೋರಾಡುತ್ತಿದ್ದೇವೆ. ಅದೆಂದಿಗೂ ನಮ್ಮದೇ ಎಂದಿದ್ದಾನೆ.

 

Leave a Reply

Your email address will not be published.

Social Media Auto Publish Powered By : XYZScripts.com