ಪ್ರಧಾನಿ ಮೋದಿ ಹತ್ಯೆಗೆ ಸಂಚು : ಬಯಲಾಯ್ತು ಮಾವೋವಾದಿಗಳ ಭಯಾನಕ ಪ್ಲ್ಯಾನ್‌ !

ಮುಂಬೈ : ಮಾಜಿ ಪ್ರಧಾನಿ ರಾಜೀವ್‌ ಗಾಂಧಿಯವರ ಹತ್ಯೆ ಮಾದರಿಯಲ್ಲೇ ಪ್ರಧಾನಿ ಮೋದಿ ಹತ್ಯೆಗೆ ಸಂಚು ನಡೆದಿರುವ ಆಘಾತಕಾರಿ ಮಾಹಿತಿ ಹೊರಬಿದ್ದಿದೆ.

ಮಾವೋವಾದಿಗಳು ಮೋದಿ ಹತ್ಯೆಗೆ ಸಂಚು ರೂಪಿಸಿದ್ದರು ಎಂಬ ಮಾಹಿತಿಯನ್ನು ಪುಣೆ ಪೊಲೀಸರು ಹೈಕೋರ್ಟ್‌ಗೆ ಮಾಹಿತಿ ನೀಡಿದ್ದಾರೆ. ಅಲ್ಲದೆ ಹತ್ಯೆಗೆ ಸಂಚು ರೂಪಿಸಿದ್ದ ದಾಖಲೆಗಳನ್ನೂ ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ.

ಇತ್ತೀಚೆಗಷ್ಟೇ ನಕ್ಸಲ್‌ ಕಾಮ್ರೇಡ್‌ ಕಿಶನ್ ಮೃತಪಟ್ಟಿದ್ದನು. ಈ ವೇಳೆ ಆತ ಮಹಾರಾಷ್ಟ್ರ ಮೂಲದ ಹೋರಾಟಗಾರ್ತಿ ರೇಣು ಜಾಕೋಬ್‌ ಎಂಬುವವರಿಗೆ ಪತ್ರ ಬರೆದಿದ್ದು, ಈ ಪತ್ರದಲ್ಲಿ ಮೋದಿ ಹತ್ಯೆ ಬಗ್ಗೆ ಸಂಚು ರೂಪಿಸಿರುವ ಬಗ್ಗೆ ಮಾಹಿತಿ ನೀಡಲಾಗಿತ್ತು. ಈ ಪತ್ರದಲ್ಲಿ, ಮೋದಿಯವನ್ನು ಹತ್ಯೆ ಮಾಡಬೇಕು. ಆದರೆ ಈ ಹತ್ಯೆ ಆತ್ಮಹತ್ಯೆಯಂತೆ ಕಾಣಬೇಕು ಎಂದು ನಕ್ಸಲರು ಸ್ಕೆಚ್‌ ರೂಪಿಸಿದ್ದರು. ಅಲ್ಲದೆ ತನಿಖೆ ವೇಳೆ ಪಶ್ಚಿಮ ಬಂಗಾಳ ಹಾಗೂ ಬಿಹಾರ ಚುನಾವಣೆ ವೇಳೆ ಮಾನವ ಬಾಂಬ್ ದಾಳಿ ನಡೆಸುವ ಸಂಚನ್ನೂ ರೂಪಿಸಿರುವ ವಿಚಾರ ಬೆಳಕಿಗೆ ಬಂದಿದೆ.

2017ರಲ್ಲಿ ನಡೆದ ಭೀವ್‌ ಕೋರೇಗಾಂವ್‌ ಹತ್ಯಾಕಾಂಡದಲ್ಲಿ ಸೆರೆಸಿಕ್ಕ ಆರೋಪಿಗಳ ಮನೆಯಲ್ಲಿ ಈ ಪತ್ರಗಳು ಲಭ್ಯವಾಗಿವೆ. ಸಭೆ ಸಮಾರಂಭಗಳಲ್ಲಿ ಸುಲಭವಾಗಿ ಪ್ರಧಾನಿ ಮೋದಿ  ಜನತೆಯ ಜೊತೆ ಬೆರೆಯುತ್ತಾರೆ. ಇದನ್ನೇ ಬಳಸಿಕೊಂಡು ಕಿಶನ್‌ ಈ ಸಂಚು ರೂಪಿಸಿದ್ದ ಎಂದು ಪೊಲೀಸರು ಹೇಳಿದ್ದಾರೆ.

Leave a Reply

Your email address will not be published.