ದೂದ್‌ಪೇಡಾ ದಿಗಂತ್‌ -ಐಂದ್ರಿತಾ ಹಸೆಮಣೆ ಏರಲು ಮಹೂರ್ತ ಫಿಕ್ಸ್…?

ಬೆಂಗಳೂರು : ಇತ್ತೀಚಿನ ದಿನಗಳಲ್ಲಿ ಬಾಲಿವುಡ್‌ ಹಾಗೂ ಸ್ಯಾಂಡಲ್‌ವುಡ್‌ನಲ್ಲಿ ತಾರಾ ಜೋಡಿಗಳ ಮದುವೆ ವಿಷಯ ಹೆಚ್ಚಾಗೇ ಕೇಳಿಬರುತ್ತಿದೆ. ಅಲ್ಲದೆ ಕೆಲ ತಾರಾ ಜೋಡಿಗಳು ಮದುವೆ ಆಗಿದ್ದಾರೆ. ಈಗ ಆ ಸಾಲಿಗೆ ದಿಗಂತ್‌ ಹಾಗೂ ಐಂದ್ರಿತಾ ರೈ ಜೋಡಿ ಸಹ ಸೇರ್ಪಡೆಯಾಗಿದೆ.

ಪ್ರೇಮಿಗಳಾದ  ಐಂದ್ರಿತ ರೈ ಹಾಗೂ ದಿಗಂತ್‍  ಹಸಮಣೆ ಏರಲು ಸಿದ್ದರಾಗಿದ್ದೇವೆ ಎಂದು ತಮ್ಮ ಅಭಿಮಾನಿಗಳಿಗೆ ಹೇಳಿಕೆ ನೀಡುವ ಮೂಲಕ ಸಿಹಿಸುದ್ದಿ ಕೊಟ್ಟಿದ್ದಾರೆ ಎಂದು ತಿಳಿದುಬಂದಿದೆ.

ಇದೇ ಡಿಸೆಂಬರ್ ಗೆ  ಈ ಲವ್‌ ಬರ್ಡ್ಸ್‌ಗಳು ಮದುವೆಯಾಗುತ್ತಾರೆ ಎಂದು ಗಾಂಧಿನಗರದಲ್ಲಿ ಮಾತುಗಳು ಕೇಳಿಬರುತ್ತಿವೆ.  ಮದುವೆ ಬಗ್ಗೆ  ಹಿರಿಯರ ಬಳಿ ಚರ್ಚಿಸಿ ಬಳಿಕ ದಿನಾಂಕ ನಿಗದಿ ಮಾಡುವುದಾಗಿ ದೂದ್‌ಪೇಡ ದಿಗಂತ್ ಹೇಳಿದ್ದಾರಂತೆ. ಹೀಗಂತ ಮಾಧ್ಯಮವೊಂದು ವರದಿ ಮಾಡಿದೆ.

ಹಾಗೆಯೇ  ದಿಗಂತ್‍ ಅಭಿನಯದ  ‘ಕಥೆಯೊಂದು ಶುರುವಾಗಿದೆ’ ಚಿತ್ರ ಕೂಡ ಡಿಸೆಂಬರ್ ಗೆ  ರಿಲೀಸ್‍ ಆಗುವ ಸಾಧ್ಯತೆ ಇದೆ. ಕೊನೆಗೂ ಐಂದ್ರಿತ, ದಿಗಂತ್‍ರ  ಪ್ರೇಮ ಪಯಣಕ್ಕೆ ಅಧಿಕೃತ ಮುದ್ರೆ ಬಿದ್ದಿದ್ದು, ದಾಂಪತ್ಯಕ್ಕೆ ಕಾಲಿಡಲು ಸಿದ್ದರಾಗುತ್ತಿದ್ದಾರೆ. ಡಿಂಪಲ್‍ ಸ್ಟಾರ್ ದಿಗಂತ್‌ಗೆ ಡಿಸೆಂಬರ್‌ನಲ್ಲಿ  ಡಬಲ್‍ ಧಮಾಕ ಕಾದಿದೆ.

Leave a Reply

Your email address will not be published.

Social Media Auto Publish Powered By : XYZScripts.com