ಆರು ವರ್ಷದ ಪುಟ್ಟ ಮಗುವನ್ನು ಅಗ್ನಿಗಾಹುತಿ ಮಾಡಿದ ಒಂದೇ ಒಂದು ಬೆಂಕಿಪೊಟ್ಟಣ…!

ಮಂಡ್ಯ : ಬೆಂಕಿ ಪಟ್ಟಣ ಹಿಡಿದುಕೊಂಡು ಆಟವಾಡುತ್ತಿದ್ದ ವೇಳೆ ಬಾಲಕಿಯೊಬ್ಬಳು ಪ್ರಾಣ ಕಳೆದುಕೊಂಡಿರುವ ಘಟನೆ ಮಂಡ್ಯ ಜಿಲ್ಲೆಯ ಪಾಂಡವಪುರದ ವಿ. ಸಿ ಕಾಲೋನಿಯಲ್ಲಿ  ನಡೆದಿದೆ.

ಜೂನ್ 1ರಂದು ಚೆಲುವರಾಜು ಹಾಗೂ ಸರ್ವಮಂಗಳ ದಂಪತಿ ಕೆಲಸಕ್ಕೆಂದು ಮನೆಯಲ್ಲಿ ಮಗಳೊಬ್ಬಳನ್ನೇ ಬಿಟ್ಟು ಹೋಗಿದ್ದರು. ಈ ವೇಳೆ ಬೆಂಕಿ ಪೊಟ್ಟಣ ಇಟ್ಟುಕೊಂಡು ಆಟವಾಡುತ್ತಿದ್ದ ಬಾಲಕಿ ಒಮ್ಮೆ ಕಡ್ಡಿ ಗೀರಿದ್ದಾಳೆ. ಬೆಂಕಿ ಆಕೆಯ ಬಟ್ಟೆಗೆ ಹತ್ತಿಕೊಂಡಿದ್ದು. ಇಡೀ ದೇಹವೇ ಸುಟ್ಟುಹೋಗಿದೆ.

ನೆರೆಮನೆಯವರು ಆಕೆಯನ್ನು ಆಸ್ಪತ್ರೆಗೆ ಸಾಗಿಸಿದರಾದರೂ ಚಿಕಿತ್ಸೆ ಫಲಕಾರಿಯಾಗದೆ ಬಾಲಕಿ ಮೃತಪಟ್ಟಿದ್ದಾಳೆ.

ಪಾಂಡವಪುರದ ಲಾಡ್ಜೊಂದನ್ನು ಸ್ವಚ್ಛ ಮಾಡಿಕೊಡಲೆಂದು ಮಧ್ಯಾಹ್ನ 1.30ರ ಸುಮಾರಿಗೆ ದಂಪತಿಗೆ ಫೋನ್ ಬಂದಿತ್ತು. ಅದಕ್ಕಿಂತಲೂ ಮುಂಚೆ ದಂಪತಿ ತಮ್ಮಿಬ್ಬರು ಮಕ್ಕಳಿಗೆ ಊಟ ಕೊಟ್ಟು ಕೆಲಸಕ್ಕೆ ತೆರಳಿದ್ದರು. ಚಿಕ್ಕ ಮಗು ತನ್ನ ತಾತನ ಮನೆಗೆ ಹೋಗಿತ್ತು. ಬಾಲಕಿ ಮಾತ್ರ ಮನೆಯಲ್ಲಿಯೇ ಉಳಿದಿದ್ದಳು. ಮಗಳು ಹೊರಗೆಲ್ಲೂ ಹೋಗಬಾರದೆಂದು ಟಿವಿ ಹಾಕಿದ್ದ ಪೋಷಕರು ಕೆಲಸ ಮುಗಿಸಿಕೊಂಡು ಬರುತ್ತೇವೆಂದು ಹೇಳಿ  ಹೊರಗೆಯಿಂದ ಬಾಗಿಲು ಹಾಕಿ ಹೋಗಿದ್ದರು.
ಮದ್ಯಾಹ್ನ 3.15ರ ಹೊತ್ತಿಗೆ ಮನೆಯಲ್ಲಿ ದೊಡ್ಡದಾಗಿ ಕಿರಿಚಿಕೊಳ್ಳುವ ಶಬ್ದ ಕೇಳಿಸಿತು. ಬಾಗಿಲು ತೆಗೆದು ನೋಡಿದಾಗ ಮಗು ಬೆಂಕಿ ಹಚ್ಚಿಕೊಂಡು ನೆಲದಲ್ಲಿ ಹೊರಳಾಡುತ್ತಿತ್ತು. ನಂತರ ಬೆಂಕಿಯನ್ನು ಆರಿಸಿ ಕೂಡಲೆ ಬಾಲಕಿಯನ್ನು ಆಸ್ಪತ್ರೆಗೆ ಕರೆದೊಯ್ದರೂ ಯಾವುದೇ ಪ್ರಯೋಜನವಾಗಿಲ್ಲ.

Leave a Reply

Your email address will not be published.