ಬೆಂಗಳೂರು : ಜೂನ್ 10 ರಂದು ‘ಎಂಗ್ಟನ ಪುಂಗಿ’ ಪುಸ್ತಕ ಬಿಡುಗಡೆ ಹಾಗೂ ನಾಟಕ ಪ್ರದರ್ಶನ

ಕೆ.ಪಿ ಪೂರ್ಣಚಂದ್ರ ತೇಜಸ್ವಿಯವರ ‘ಪರಿಸರದ ಕತೆ’ ಕೃತಿಯನ್ನು ಆಧರಿಸಿದ ‘ಎಂಗ್ಟನ ಪುಂಗಿ’ ಪುಸ್ತಕ ಬಿಡುಗಡೆ ಮತ್ತು ನಾಟಕ ಪ್ರದರ್ಶನ ಭಾನುವಾರ ಜೂನ್ 10ರಂದು ಬೆಂಗಳೂರಿನಲ್ಲಿ ನಡೆಯಲಿದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಕಾರದೊಂದಿಗೆ, ವಿಶ್ವಪಥ ಕಲಾ ಸಂಗಮ ಸಂಸ್ಥೆ ಆಯೋಜಿಸಿರುವ ಈ ಕಾರ್ಯಕ್ರಮ ಬೆಂಗಳೂರಿನ ಹನುಮಂತ ನಗರದ ಕೆ.ಎಚ್ ಕಲಾಸೌಧದಲ್ಲಿ ಜರುಗಲಿದೆ.

ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ಹಾಗೂ ಕೇಂದ್ರ ಸಾಹಿತ್ಯ ಅಕಾಡೆಮಿ ಅಧ್ಯಕ್ಷರೂ ಆದ ಚಂದ್ರಶೇಖರ ಕಂಬಾರ ಅವರು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕರಾದ ವಿಶು ಕುಮಾರ್ ಸಮಾರಂಭಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಲಿದ್ದಾರೆ. ಹಿರಿಯ ರಂಗಕರ್ಮಿಗಳಾದ ಎಸ್.ವಿ ಕೃಷ್ಣ ಶರ್ಮ, ಸ್ನೇಹಾ ಬುಕ್ ಹೌಸ್ ನ ಪರಶಿವಪ್ಪ ಕೆ.ಬಿ, ಚಿತ್ರ ಕಲಾವಿದ ಸಿದ್ದು ಇಟಗಿ ಉಪಸ್ಥಿತರಿರಲಿದ್ದಾರೆ.

No automatic alt text available.

ಅಶೋಕ್. ಬಿ ಅವರ ನಿರ್ದೇಶನದ ಎರಡು ನಾಟಕಗಳ ಪ್ರದರ್ಶನಗೊಳ್ಳಲಿವೆ. ಸಾಯಂಕಾಲ 4.30ಕ್ಕೆ ಪೂರ್ಣಚಂದ್ರ ತೇಜಸ್ವಿಯವರ ‘ಎಂಗ್ಟನ ಪುಂಗಿ’ ನಾಟಕ ಪ್ರದರ್ಶನವಿದ್ದು, ಪ್ರವೇಶ ಉಚಿತವಿದೆ. 7.30ಕ್ಕೆ ಎಚ್.ಡುಂಡಿರಾಜ್ ಅವರ ‘ಪುಕ್ಕಟೆ ಸಲಹೆ’ ಹಾಸ್ಯ ಪ್ರದರ್ಶನಗೊಳ್ಳಲಿದ್ದು ಅದಕ್ಕೆ 100 ರೂಪಾಯಿ ಪ್ರವೇಶ ದರವಿದೆ.

Image may contain: 3 people, beard, hat and text

Image may contain: text

ದಿನಾಂಕ : 10-06-2018, ಸಮಯ : ಸಾಯಂಕಾಲ 4.30 ಗಂಟೆಗೆ

ಸ್ಥಳ : ಕೆ.ಎಚ್ ಕಲಾಸೌಧ, ರಾಮಾಂಜನೇಯ ಗುಡ್ಡದ ಹತ್ತಿರ, ಹನುಮಂತನಗರ, ಬೆಂಗಳೂರು

Leave a Reply

Your email address will not be published.