ಕಾಮೆಂಟೇಟರ್ ಹರ್ಷ ಭೋಗ್ಲೆಯನ್ನು ‘Bro’ ಅಂದ ರಾಶಿದ್ ಖಾನ್ : ಅಫ್ಘನ್ ಕ್ರಿಕೆಟರ್ಗೆ ನೆಟ್ಟಿಗರ ಕ್ಲಾಸ್..!

ಡೆಹ್ರಾಡೂನ್ ನಲ್ಲಿ ಗುರುವಾರ ನಡೆದ ಮೂರನೇ ಟಿ-20 ಪಂದ್ಯದಲ್ಲಿ ಬಾಂಗ್ಲಾದೇಶ ವಿರುದ್ಧ ಗೆದ್ದ ಅಫಘಾನಿಸ್ತಾನ ಸರಣಿಯನ್ನು 3-0 ರಿಂದ ಕ್ಲೀನ್ ಸ್ವೀಪ್ ಮಾಡಿದೆ. ಕೊನೆಯ ಓವರ್ ನಲ್ಲಿ ಬಾಂಗ್ಲಾ ತಂಡಕ್ಕೆ 9 ರನ್ ಬೇಕಿದ್ದಾಗ ಅತ್ಯುತ್ತಮ ಬೌಲಿಂಗ್ ಮಾಡಿದ ಸ್ಪಿನ್ನರ್ ರಾಶಿದ್ ಖಾನ್ ಪಂದ್ಯ ಗೆಲ್ಲಲು ಕಾರಣರಾಗಿದ್ದರು.

ಸದ್ಭುತ ಬೌಲಿಂಗ್ ಪ್ರದರ್ಶಿಸುವ ಮೂಲಕ ಸರಣಿ ಶ್ರೇಷ್ಟ ಪ್ರಶಸ್ತಿ ಪಡೆದ ರಾಶಿದ್ ಖಾನ್ ಅವರನ್ನು ಖ್ಯಾತ ಕಾಮೆಂಟೇಟರ್ ಹರ್ಷ ಭೋಗ್ಲೆ ಟ್ವೀಟ್ ಮಾಡಿ ಅಭಿನಂದಿಸಿದ್ದಾರೆ. ಹರ್ಷ ಭೋಗ್ಲೆಯವರಿಗೆ ಧನ್ಯವಾದ ಹೇಳುವಾಗ ಅಫ್ಘನ್ ಕ್ರಿಕೆಟಿಗ ಎಡವಟ್ಟು ಮಾಡಿಕೊಂಡಿದ್ದಾರೆ.

ಭೋಗ್ಲೆ ಟ್ವೀಟ್ ಗೆ ರಿಪ್ಲೈ ಮಾಡಿರುವ ರಾಶಿದ್ ಖಾನ್ ‘ Thank you Bro ‘ ಎಂದು ಟ್ವೀಟ್ ಮಾಡಿದ್ದಾರೆ. 56 ವರ್ಷ ವಯಸ್ಸಿನ ಹಿರಿಯ ಕಾಮೆಂಟೇಟರ್ ಹರ್ಷ ಭೋಗ್ಲೆಯವರನ್ನು 19 ವರ್ಷ ವಯಸ್ಸಿನ ರಾಶಿದ್ ಖಾನ್ ‘ಬ್ರೋ’ ಎಂದು ಸಂಬೋಧಿಸಿದ್ದು, ಅಭಿಮಾನಿಗಳ ಅಸಮಾಧಾನಕ್ಕೆ ಕಾರಣವಾಗಿದೆ.

‘ ಹರ್ಷ ಭೋಗ್ಲೆ ನಿಮ್ಮ ತಂದೆಯ ವಯಸ್ಸಿನವರಾಗಿದ್ದಾರೆ ‘ , ‘ ಅವರನ್ನು ಸರ್ ಎಂದು ಸಂಬೋಧಿಸಿ ‘, ‘ ಹಿರಿಯರಿಗೆ ಗೌರವ ನೀಡುವುದನ್ನು ಕಲಿಯಿರಿ ‘ ಎಂದು ಟ್ವೀಟ್ ಮಾಡಿರುವ ನೆಟ್ಟಿಗರು ರಾಶಿದ್ ಖಾನ್ ಗೆ ಕ್ಲಾಸ್ ತೆಗೆದುಕೊಂಡಿದ್ದಾರೆ.

 

Leave a Reply

Your email address will not be published.