ಕಾಂಗ್ರೆಸ್, ಜೆಡಿಎಸ್ ಸೇರಿ ರಾಜ್ಯವನ್ನು ಹರಿದು, ಮುಕ್ಕಿ, ನುಂಗಿ ನೀರು ಕುಡೀತಾರೆ : ಸಿ.ಟಿ ರವಿ

ಚಿಕ್ಕಮಗಳೂರಿನಲ್ಲಿ ಬಿಜೆಪಿ ಶಾಸಕ ಸಿ.ಟಿ ರವಿ ಹೇಳಿಕೆ ನೀಡಿದ್ದಾರೆ. ಸಂಪುಟ ವಿಸ್ತರಣೆಯಲ್ಲಿ ಭಿನ್ನಮತ ಹಿನ್ನೆಲೆಯಲ್ಲಿ ಮಾತನಾಡಿರುವ ಸಿ.ಟಿ ರವಿ ‘ ಸಮ್ಮಿಶ್ರ ಸರ್ಕಾರ ಸುಖ ಪ್ರಸವನೂ ಅಲ್ಲ, ಸಿಜೇರಿಯನ್ ಅಲ್ಲ. ಮುಖ್ಯಮಂತ್ರಿಗಳೇ ಹೇಳಿದಂತೆ ಇದು ಸಾಂಧರ್ಭೀಕ ಕೂಸು ‘ ಎಂದಿದ್ದಾರೆ.

ಇದು ನೈತಿಕ ಮೌಲ್ಯದಿಂದ ಹುಟ್ಟಿದ ಕೂಸಲ್ಲ ಅಕ್ರಮ ಸಂಭಂದ ಎನ್ನುವ ರೀತಿಯಲ್ಲಿ ರುಂಡ ಒಂದು ಮುಂಡ ಒಂದು. ಪರಸ್ಪರ ಬೈದಾಡಿಕೊಂಡು ನೀಚ ಅಯೋಗ್ಯ ಎಂದು ಬೈದಾಡಿಕೊಂಡವರೇ ಈಗ ಒಟ್ಟಿಗೆ ಸೇರಿ ಸರ್ಕಾರ ರಚನೆ ಮಾಡಿದ್ರಿಂದ ಓಳ್ಳೆಯ ಫಲಿತಾಂಶ ಬರೋದು ಹೇಗೆ ಸಾಧ್ಯ..? ಎಂದು ಕೇಳಿದ್ದಾರೆ.

ಖಾತೆ ಖ್ಯಾತೆ ಇನ್ನು ಮುಗಿದಿಲ್ಲ ಇನ್ನು ಮುಗಿಯೋ ಲಕ್ಷಣಗಳೂ ಕಾಣುತ್ತಿಲ್ಲ. ಇದು ಹಳಸಿದವರ ಸಾಗೂ ಹಸಿದವರ ಸರ್ಕಾರವಾಗಿದೆ. ಹಳಸಿದವರು ಕಾಂಗ್ರೆಸ್, ಹಸಿದವರು ಜೆಡಿಎಸ್. ಇವರಿಬ್ಬರು ಸೇರಿ ರಾಜ್ಯವನ್ನ ಹರಿದು, ಮುಕ್ಕಿ, ನುಂಗಿ ನೀರು ಕುಡಿಯುತ್ತಾರೆ. ಸರ್ಕಾರ ಆದಷ್ಟು ಬೇಗ ಬಿದ್ದು ಹೋಗುತ್ತೆ ‘ ಎಂಧು ಹೇಳಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com