Cricket : ಶ್ರೀಲಂಕಾ ಸರಣಿ : U-19 ಭಾರತ ತಂಡದಲ್ಲಿ ಅರ್ಜುನ್ ತೆಂಡೂಲ್ಕರ್ ಆಯ್ಕೆ

ಜುಲೈ ತಿಂಗಳಲ್ಲಿ ನಡೆಯಲಿರುವ ಶ್ರೀಲಂಕಾ ವಿರುದ್ಧ ಸರಣಿಗೆ ಭಾರತ ಅಂಡರ್ – 19 ತಂಡವನ್ನು ಬಿಸಿಸಿಐ ಗುರುವಾರ ಪ್ರಕಟಿಸಿದೆ. ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅವರ ಪುತ್ರ ಅರ್ಜುನ್ ತೆಂಡೂಲ್ಕರ್ ಅಂಡರ್-19 ಭಾರತ ತಂಡದಲ್ಲಿ ಆಯ್ಕೆಯಾಗಿದ್ದಾರೆ.

ಶ್ರೀಲಂಕಾ ಹಾಗೂ ಭಾರತ ತಂಡಗಳ ನಡುವೆ 4 ದಿನದ ಎರಡು ಪಂದ್ಯಗಳು ಹಾಗೂ 4 ಏಕದಿನ ಪಂದ್ಯಗಳು ನಡೆಯಲಿವೆ. 4 ದಿನದ ಪಂದ್ಯಗಳನ್ನು ಆಡಲಿರುವ ಭಾರತ ತಂಡದಲ್ಲಿ 18 ವರ್ಷದ ಅರ್ಜುನ್ ತೆಂಡೂಲ್ಕರ್ ಆಲ್ರೌಂಡರ್ ರೂಪದಲ್ಲಿ ಸ್ಥಾನ ಪಡೆದಿದ್ದಾರೆ. ಆದರೆ ಏಕದಿನ ತಂಡದಲ್ಲಿ ಅರ್ಜುನ್ ಗೆ ಅವಕಾಶ ನೀಡಲಾಗಿಲ್ಲ.

ಆಲ್ರೌಂಡರ್ ರೂಪದಲ್ಲಿ ಸ್ಥಾನ ಪಡೆದಿರುವ ಅರ್ಜುನ್ ತೆಂಡೂಲ್ಕರ್ ಎಡಗೈ ಬ್ಯಾಟ್ಸಮನ್ ಆಗಿದ್ದು, ಹಾಗೂ ಎಡಗೈ ಮಧ್ಯಮ ವೇಗದ ಬೌಲಿಂಗ್ ಮಾಡುತ್ತಾರೆ.

 

 

One thought on “Cricket : ಶ್ರೀಲಂಕಾ ಸರಣಿ : U-19 ಭಾರತ ತಂಡದಲ್ಲಿ ಅರ್ಜುನ್ ತೆಂಡೂಲ್ಕರ್ ಆಯ್ಕೆ

Leave a Reply

Your email address will not be published.

Social Media Auto Publish Powered By : XYZScripts.com