Cricket : ಅಫಘಾನಿಸ್ತಾನಕ್ಕೆ 3-0 ಸರಣಿ ಗೆಲುವು : ಬಾಂಗ್ಲಾ ತಂಡಕ್ಕೆ ವೈಟ್ ವಾಷ್ ಮುಖಭಂಗ

ಉತ್ತರಾಖಂಡದ ಡೆಹ್ರಾಡೂನ್ ನ ರಾಜೀವ್ ಗಾಂಧಿ ಮೈದಾನದಲ್ಲಿ ಗುರುವಾರ ನಡೆದ ಟಿ-20 ಪಂದ್ಯದಲ್ಲಿ ಬಾಂಗ್ಲಾದೇಶದ ವಿರುದ್ಧ ಅಫಘಾನಿಸ್ತಾನ ರೋಚಕ 1 ರನ್ ಜಯ ಸಾಧಿಸಿದೆ. ಈ ಮೂಲಕ ಮೂರು ಪಂದ್ಯಗಳ ಸರಣಿಯನ್ನು 3-0ರಿಂದ ಗೆದ್ದ ಅಫಘಾನಿಸ್ತಾನ ಟಿ-20 ಸರಣಿಯನ್ನು ವೈಟ್ ವಾಷ್ ಮಾಡಿದೆ.

Image result for bangla afghanistan cricket white wash

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಅಫಘಾನಿಸ್ತಾನ ನಿಗದಿತ 20 ಓವರುಗಳಲ್ಲಿ 6 ವಿಕೆಟ್ ನಷ್ಟಕ್ಕೆ 145 ರನ್ ಮೊತ್ತ ಕಲೆ ಹಾಕಿತು. ಅಫಘಾನಿಸ್ತಾನ ಪರವಾಗಿ ಸಮೀವುಲ್ಲಾ ಶೇನ್ವಾರಿ 33, ಅಸ್ಘರ್ ಸ್ಟಾನಿಕ್ಜಾಯ್ 27 ಹಾಗೂ ಮೊಹಮ್ಮದ್ ಶೆಹಜಾದ್ 26 ರನ್ ಗಳಿಸಿದರು.

ಗುರಿಯನ್ನು ಬೆನ್ನತ್ತಿದ ಬಾಂಗ್ಲಾದೇಶ 20 ಓವರುಗಳ ಅಂತ್ಯಕ್ಕೆ 6 ವಿಕೆಟ್ ಕಳೆದುಕೊಂಡು 144 ರನ್ ಗಳಿಸಿ 1 ರನ್ ಅಂತರದ ಸೋಲು ಕಂಡಿತು. ಬಾಂಗ್ಲಾ ಪರವಾಗಿ ಮುಷ್ಫಿಕುರ್ ರಹೀಮ್ 46 ಹಾಗೂ ಮೊಹಮ್ಮದುಲ್ಲಾಹ್ ರಿಯಾ 45 ರನ್ ಗಳಿಸಿದರು.

Image result for bangla afghanistan cricket white wash

ಸರಣಿಯಲ್ಲಿ ಉತ್ತಮ ಬೌಲಿಂಗ್ ಪ್ರದರ್ಶನ ತೋರಿದ ಅಫ್ಘನ್ ತಂಡದ ಲೆಗ್ ಸ್ಪಿನ್ನರ್ ರಾಶಿದ್ ಖಾನ್ ಸರಣಿ ಶ್ರೇಷ್ಟ ಪ್ರಶಸ್ತಿ ಪಡೆದರು.

Leave a Reply

Your email address will not be published.