ಸಫಾರಿಗೆ ತೆರಳಿದ್ದವರ ಮೇಲೆ ಕಾಡಾನೆ ದಾಳಿ : ಎಲ್ಲೆಡೆ ವೈರಲ್ ಆಗ್ತಿದೆ ವಿಡಿಯೋ

ಚಿಕ್ಕಮಗಳೂರು : ಸಫಾರಿಗೆಂದು ತೆರಳಿದ್ದವರ ಮೇಲೆ ಮುತ್ತೋಡಿ ಭದ್ರಾ ಅಭಯಾರಣ್ಯ ವ್ಯಾಪ್ತಿಯಲ್ಲಿ ಕಾಡಾನೆ ತನ್ನ‌ಮರಿಯೊಂದಿಗೆ ಪ್ರವಾಸಿಗರ ಮೇಲೆ ದಾಳಿ ನಡೆಸಲು ಮುಂದಾದ ವಿಡಿಯೋ ವೈರಲ್ ಆಗಿದೆ.

ಕಳೆದ ಮೂರ್ನಾಲ್ಕು ದಿನದ ಹಿಂದೆ ಮುತ್ತೋಡಿ ಅಭಯಾರಣ್ಯ ವ್ಯಾಪ್ತಿಯಲ್ಲಿ ಪ್ರವಾಸಿಗರು ಸಫಾರಿಗೆಂದು ತೆರಳಿದ್ದರು. ಈ ವೇಳೆ ಕೆರೆಯೊಂದರಲ್ಲಿ ಕಾಡಾನೆ ತನ್ನ ಮರಿಗಳೊಂದಿಗೆ ಕೆರೆಯಲ್ಲಿ ಅಟವಾಡುತ್ತಿತ್ತು. ಇದನ್ನು ವೀಕ್ಷಿಸಲು ಪ್ರವಾಸಿಗರು ವಾಹನ ನಿಲ್ಲಿಸಿದ್ದಾರೆ. ಈ ವೇಳೆ ಕೆರೆಯಿಂದ ಹೊರ ಬಂದ ಕಾಡಾನೆ ವಾಹನ, ಪ್ರವಾಸಿಗರನ್ನ ನೋಡುತ್ತಿದ್ದಂತೆ ತನ್ನ ಮರಿಯೊಂದಿಗೆ ದಾಳಿ ನಡೆಸಲು ಮುಂದಾಗಿದೆ, ಅದ್ರೆ ವಾಹನ ಬಳಿ ಬಂದು ದಾಳಿ ನಡೆಸದೆ ವಾಪಸ್ಸಾಗಿರುವ ವಿಡಿಯೋ ಈಗ ವೈರಲ್ ಅಗಿದೆ.

Leave a Reply

Your email address will not be published.