ಜನರ ಮನಗೆದ್ದ ನೂತನ ಸಿಎಂ : ನಿರುದ್ಯೋಗ ನಿವಾರಣೆಗೆ ಸಿದ್ಧವಾಗಿದೆ ಹೊಸ ಪ್ಲ್ಯಾನ್‌ !

ಬೆಂಗಳೂರು : ನಿರುದ್ಯೋಗ ಸಮಸ್ಯೆ ನಿವಾರಣೆಗಾಗಿ ಸಿಎಂ ಕುಮಾರಸ್ವಾಮಿ ಹೊಸ ಪ್ಲ್ಯಾನ್ ಮಾಡಿದ್ದಾರೆ. ತಿಂಗಳಲ್ಲಿ ಒಂದು ದಿನ ಮಿನಿ ಉದ್ಯೋಗ ಮೇಳ ನಡೆಸಲು ಕುಮಾರಸ್ವಾಮಿ ಸರ್ಕಾರ ತೀರ್ಮಾನಿಸಿದೆ.

ವಿಧಾನಸೌಧದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಇತ್ತೀಚಿನ ದಿನಗಳಲ್ಲಿ ಯುವಕರು ಉದ್ಯೋಗ ಸಿಗದೆ ಕಷ್ಟ ಪಡುತ್ತಿದ್ದಾರೆ. ಹೀಗಾಗಿ ಉದ್ಯೋಗಕ್ಕಾಗಿ ಹುಡುಕಾಟ ನಡೆಸುವವರಿಗೆ ಅವಕಾಶ ನೀಡುವ ಸಲುವಾಗಿ ವೇದಿಕೆ ಒದಗಿಸಲು ಸಿದ್ಧತೆ ನಡೆಸಿದ್ದೇವೆ. ನಿರುದ್ಯೋಗ ಸಮಸ್ಯೆ ನಿವಾರಣೆಗಾಗಿ ತಿಂಗಳಲ್ಲಿ ಒಂದು ದಿನ ಮಿನಿ ಉದ್ಯೋಗ ಮೇಳ ನಡೆಸುವ ಉದ್ದೇಶ ಹೊಂದಿರುವುದಾಗಿ ಹೇಳಿದ್ದಾರೆ.

ಜನತಾ ದರ್ಶನದಲ್ಲಿ ಪ್ರಮುಖವಾಗಿ ಉದ್ಯೋಗ ಸಮಸ್ಯೆ, ಶೈಕ್ಷಣಿಕ ಸಮಸ್ಯೆಗಳು ಸಾಕಷ್ಟು ಕಂಡುಬಂದಿವೆ. ಈ ನಿಟ್ಟಿನಲ್ಲಿ ಅವರಿಗೆ ನೆರವು ನೀಡುವ ಸಂಬಂಧ ಮಿನಿ ಉದ್ಯೋಗ ಮೇಳ ನಡೆಸಲು ತೀರ್ಮಾನಿಸಲಾಗಿದೆ. ಉದ್ಯೋಗ ಮೇಳವನ್ನು ಮುಖ್ಯಮಂತ್ರಿಗಳ ಅಧಿಕೃತ ಗೃಹ ಕಚೇರಿ ಕೃಷ್ಣಾದಲ್ಲಿ ನಡೆಸುವ ಯೋಚನೆ ಇದೆಯಾದರೂ ಯಾವ ಸ್ಥಳದಲ್ಲಿ ನಡೆಸಿದರೆ ಸೂಕ್ತ ಎಂಬುದರ ಬಗ್ಗೆ ಸಮಾಲೋಚನೆ ನಡೆಸಿ ತೀರ್ಮಾನ ಕೈಗೊಳ್ಳುವುದಾಗಿ ಹೇಳಿದ್ದಾರೆ.

 

Leave a Reply

Your email address will not be published.

Social Media Auto Publish Powered By : XYZScripts.com