ಶಾಸಕರನ್ನು ಸಮಾಧಾನಪಡಿಸಲು ಕಾಂಗ್ರೆಸ್‌ ಹೈಕಮಾಂಡ್‌ನಿಂದ ಮಾಸ್ಟರ್‌ ಪ್ಲ್ಯಾನ್‌ : ಬಿಜೆಪಿಗೆ ಭಾರೀ ನಿರಾಸೆ ?

ಬೆಂಗಳೂರು : ಸಚಿವ ಸ್ಥಾನ ಕೈ ತಪ್ಪಿದ ಹಿನ್ನೆಲೆಯಲ್ಲಿ ಹಿರಿಯ ನಾಯಕರ ಮುನಿಸಿಗೆ ಉಪ ಮುಖ್ಯಮಂತ್ರಿ ಜಿ. ಪರಮೇಶ್ವರ್‌ ಮದ್ದುಸವರುವ ಕೆಲಸ ಮಾಡುತ್ತಿದ್ದರೆ. ಅದ್ಯಾಕೋ ಹೈಕಮಾಂಡ್‌ ಮಾತ್ರ ಇದರ ಬಗ್ಗೆ ಹೆಚ್ಚಿಗೆ ತಲೆಕೆಡಿಸಿಕೊಂಡಂತಿಲ್ಲ ಎನ್ನಲಾಗುತ್ತಿದೆ.

ಆದರೆ ಕಾಂಗ್ರೆಸ್‌ ಉಸ್ತುವಾರಿ ವೇಣುಗೋಪಾಲ್ ಮಾತ್ರ ಈ ಬಗ್ಗೆ ರಾಷ್ಟ್ರೀಯ ಪತ್ರಿಕೆಯೊಂದಕ್ಕೆ ಹೇಳಿಕೆ ನೀಡಿದ್ದು, ರಾಜ್ಯ ರಾಜಕಾರಣದಲ್ಲಿ ಕುತೂಹಲ ಹೆಚ್ಚುವಂತೆ ಮಾಡಿದೆ. ಈ ಬಗ್ಗೆ ಮಾತನಾಡಿರುವ ವೇಣುಗೋಪಾಲ್, ಈಗ ರಚಿಸಿರುವ ಸಂಪುಟವೇ ಅಂತಿಮವಲ್ಲ, ಕಾಂಗ್ರೆಸ್‌ ನಾಯಕರು ಈ ಬಗ್ಗೆ ಗಮನ ಹರಿಸುತ್ತಿದ್ದಾರೆ. ಅಲ್ಲದೆ ಪ್ರತೀ ಆರು ತಿಂಗಳಿಗೊಮ್ಮೆ ಸಂಪುಟ ಸಚಿವರ ಕೆಲಸವನ್ನು ಗಣನೆಗೆ ತೆಗೆದುಕೊಳ್ಳುತ್ತೇವೆ ಎನ್ನುವ ಮೂಲಕ ಅಸಮಾಧಾನಗೊಂಡಿರುವ ನಾಯಕರಿಗೆ ಮತ್ತೊಂದು ಅವಕಾಶ ಸಿಗುವ ಸಾಧ್ಯತೆ ಇದೆ ಕಾಯಿರಿ ಎಂಬ ಸಂದೇಶ ರವಾನಿಸಿದ್ದಾರೆ.

ಮೊದಲ ಬಾರಿ ಆಯ್ಕೆಯಾದವರಿಗೆ ಸಚಿವ ಸ್ಥಾನ ನೀಡಿಲ್ಲ. ಅಲ್ಲದೆ ಇನ್ನೂ ಸ್ಥಾನಗಳನ್ನು ಪೂರ್ತಿಯಾಗಿ ಭರ್ತಿ ಮಾಡಿಲ್ಲ. ಇನ್ನೂ ಎರಡು ವರ್ಷಗಳಲ್ಲಿ  ನಿಗದಿತಿ ಗುರಿ ಮುಟ್ಟದವರನ್ನು ಸಚಿವ ಸ್ಥಾನದಿಂದ ಕೆಳಗಿಳಿಸುವುದಾಗಿ ಹೇಳಿದ್ದಾರೆ.

ಈ ಮೂಲಕ ಅಸಮಾಧಾನಗೊಂಡ  ಸಚಿವರಿಗೆ ಮತ್ತೆ   ಸಚಿವ ಸ್ಥಾನದ ಕನಸಿನ ಬೀಜ ಬಿತ್ತಿದ್ದಾರೆ.

 

Leave a Reply

Your email address will not be published.