ಪರಮೇಶ್ವರ್ ಹುದ್ದೆ ಮೇಲೇ M.B ಪಾಟೀಲ್ ಕಣ್ಣು : DCM ಹುದ್ದೆಗಾಗಿ ಮಾಜಿ ಸಚಿವರ ಪಟ್ಟು !

ಬೆಂಗಳೂರು : ಸಚಿವ ಸ್ಥಾನ ಕೈ ತಪ್ಪಿದ್ದಕ್ಕೆ ಅಸಮಾಧಾನಗೊಂಡಿರುವ ಶಾಸಕ ಎಂ.ಬಿ ಪಾಟೀಲ್, ಇದೀಗ ಡಿಸಿಎಂ ಹುದ್ದೆ ಮೇಲೆ ಕಣ್ಣಿಟ್ಟಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಇಂದು ಎಂ.ಬಿ ಪಾಟೀಲ್ ಅವರ ಮನವೊಲಿಸಲು ಉಪಮುಖ್ಯಮಂತ್ರಿ ಜಿ. ಪರಮೇಶ್ವರ್‌, ಪಾಟೀಲ್ ಮನೆಗೆ ತೆರಳಿದ್ದರು. ಈ ವೇಳೆ ನನಗೆ ಕೊಡುವುದಾದರೆ ಡಿಸಿಎಂ ಹುದ್ದೆ ಕೊಡಿ ಎಂದು ಪಟ್ಟುಹಿಡಿದಿರುವುದಾಗಿ ಹೇಳಲಾಗಿದೆ. ಮೊದಲ ಹಂತದಲ್ಲೇ ಸಚಿವ ಸ್ಥಾನ ಕೊಡಬಹುದಿತ್ತು. ಆದರೆ ಕೊಡಲಿಲ್ಲ. ಈಗ ಸಚಿವ ಸ್ಥಾನವೇನು ಬೇಡ. ಡಿಸಿಎಂ ಹುದ್ದೆ ಕೊಟ್ರೆ ಉತ್ತರ ಕರ್ನಾಟಕ ಭಾಗಕ್ಕೂ ಅನುಕೂಲವಾಗುತ್ತದೆ ಎಂದು ಡಿಮ್ಯಾಂಡ್ ಮಾಡಿದ್ದಾರೆ ಎಂದು ಬಲ್ಲ ಮೂಲಗಳು ಏನ್‌ಸುದ್ದಿಗೆ ತಿಳಿಸಿವೆ.

ಅಲ್ಲದೆ ಇಂದು ಸದಾಶಿವನಗರದಲ್ಲಿರುವ ಎಂ.ಬಿ ಪಾಟೀಲ್ ಅವರ ನಿವಾಸಕ್ಕೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಭೇಟಿ ನೀಡಿ ಮನವೊಲಿಕೆಗೆ ಯತ್ನಿಸಿದ್ದಾರೆ. ಹೆಚ್.ಡಿ ಕುಮಾರಸ್ವಾಮಿ ಭೇಟಿ ಬಳಿಕ ಮಾತನಾಡಿದ ಎಂ.ಬಿ ಪಾಟೀಲ್, ಯಾವುದೇ ಕಾರಣಕ್ಕೂ ನಾನು ಏಕಾಂಗಿಯಲ್ಲ. ನನ್ನೊಂದಿಗೆ 15ರಿಂದ 20 ಶಾಸಕರಿದ್ದಾರೆ. ನಾವೆಲ್ಲ ಒಂದೆಡೆ ಕುಳಿತು  ಪಕ್ಷದ ಚೌಕಟ್ಟಿನಲ್ಲಿ ಚರ್ಚಿಸಿ ಮುಂದಿನ ತೀರ್ಮಾನ ಕೈಗೊಳ್ಳುತ್ತೇವೆ ಎಂದಿದ್ದಾರೆ.

Leave a Reply

Your email address will not be published.