ಅತೃಪ್ತರನ್ನು ಕಾಂಗ್ರೆಸ್‌ನಲ್ಲೇ ಇರಿಸಿಕೊಳ್ಳಲು ಬಿಗ್‌ ಪ್ಲ್ಯಾನ್‌ : ಯಶಸ್ವಿಯಾಗುತ್ತಾ 2 : 3 ಫಾರ್ಮುಲಾ

ಬೆಂಗಳೂರು : ಸಚಿವ ಸ್ಥಾನ ಆಕಾಂಕ್ಷಿಗಳನ್ನು ಸಮಾಧಾನ ಮಾಡಲು ಕಾಂಗ್ರೆಸ್ ಹೊಸ ಫಾರ್ಮುಲಾವೊಂದನ್ನು ಕಂಡು ಹಿಡಿದಿದೆ. ಈ ಕುರಿತು ಕಾಂಗ್ರೆಸ್‌ ನಾಯಕ ದಿನೇಶ್ ಗುಂಡೂರಾವ್ ಮಾತನಾಡಿದ್ದು, ಮೊದಲು ಸಚಿವರಾದವರಿಗೆ 2 ವರ್ಷ ಹಾಗೂ ಎರಡನೇ ಬಾರಿ ಸಚಿವರಾದವರಿಗೆ 3 ವರ್ಷ ಅಧಿಕಾರಾವಧಿ ನೀಡಲು ಕಾಂಗ್ರೆಸ್‌ ತೀರ್ಮಾನ ಮಾಡಿರುವುದಾಗಿ ಹೇಳಿದ್ದಾರೆ.

ಆದ್ದರಿಂದ ಈ ಟರ್ಮ್‌ನಲ್ಲಿ ಸಚಿವರಾಗುವವರಿಗೆ 2 ವರ್ಷ ಸಚಿವ ಸ್ಥಾನ ಸಿಗಲಿದೆ. 2 ವರ್ಷ ಕಾದು ಬಳಿಕ ಸಚಿವರಾಗುವವರಿಗೆ 3 ವರ್ಷ ಅವಕಾಶ ಸಿಗಲಿದೆ ಎಂದು ದಿನೇಶ್ ಗುಂಡೂರಾವ್‌ ಹೇಳಿದ್ದಾರೆ.

ಈ ಮೂಲಕ ಸಚಿವ ಸ್ಥಾನ ಸಿಗದಿದ್ದಕ್ಕೆ ಅತೃಪ್ತರಾಗಿರುವ ಶಾಸಕರಿಗೆ ಮತ್ತೊಮ್ಮೆ ಆಸೆ ಹುಟ್ಟಿಸುವ ಕೆಲಸ ಮಾಡಿದ್ದು, ಎರಡನೇ ಟರ್ಮ್‌ನಲ್ಲಿ ಯಾರ್ಯಾರು ಮಂತ್ರಿಗಳಾಗುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ. ಅಲ್ಲದೆ ಇದಕ್ಕೆ ಅತೃಪ್ತ ಶಾಸಕರು ಒಲಿಯುತ್ತಾರಾ ಎಂಬುದನ್ನೂ ಕಾದುನೋಡಬೇಕಿದೆ.

 

Leave a Reply

Your email address will not be published.

Social Media Auto Publish Powered By : XYZScripts.com