ವೈರಿಗಳೆಲ್ಲ ಒಟ್ಟಾಗಿ ಬಂದ್ರೂ ಬಾದಾಮಿಯಲ್ಲಿ ನನ್ನನ್ನು ಸೋಲಿಸಲು ಸಾಧ್ಯವಾಗಿಲ್ಲ : ಸಿದ್ದರಾಮಯ್ಯ

ಬಾಗಲಕೋಟೆ : ಸಚಿವ ಸ್ಥಾನ ಸಿಗದಿರೋದಕ್ಕೆ ಪಕ್ಷದಲ್ಲಿ ಅಸಮಾಧಾನ ಇರೋದು ನಿಜ. ಎಲ್ಲರ ಮನವೊಲಿಸುತ್ತೇವೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ .ಇನ್ನು ಮಾಜಿ ಸಚಿವ ಎಂ. ಬಿ ಪಾಟಿಲ್ ನನ್ನ ಭೇಟಿಯಾಗಿದ್ದು ನಿಜ ಎಂದಿರುವ ಸಿದ್ದರಾಮಯ್ಯ, ನನ್ನನ್ನು ಭೇಟಿಯಾಗಿದ್ದಾರೆ ಆದರೆ ಕಣ್ಣೀರು ಹಾಕಿಲ್ಲ. ಅವರನ್ನು ಸಮಾಧಾನ ಮಾಡಿದ್ದೇನೆ ಎಂದು ಸಮಜಾಯಿಷಿ ನೀಡಿದರು.

ಇದೆ ವೇಳೆ ಬಿಜೆಪಿ ಬಗ್ಗೆ ಮಾತನಾಡಿದ ಸಿದ್ದರಾಮಯ್ಯ, ನಮಗೆ ರಾಜಕೀಯದಲ್ಲಿ ಬಿಜೆಪಿಯೇ ಮೊದಲ ವೈರಿ. ಬಿಜೆಪಿಯವರು ಮೊದಲು ತಮ್ಮ ಅಸಮಾಧಾನ ಸರಿಪಡಿಸಿಕೊಳ್ಳಲಿ ಎಂದು ಚಾಟಿ ಬೀಸಿದರು. ಎಲ್ಲಾ ವೈರಿಗಳು ನನ್ನ ಸೋಲಿದೋದಕ್ಕೆ ಇಲ್ಲಿಗೆ ಬಂದಿದ್ರು ಆದ್ರೂ ಅವರ ಷಡ್ಯಂತ್ರಕ್ಕೆ ನೀವು ಮಣಿಯಲಿಲ್ಲ. ಇಷ್ಟೆಲ್ಲಾ ಷಡ್ಯಂತ್ರಗಳ‌ ಮಧ್ಯೆ ನೀವು ನನ್ನ ಗೆಲ್ಲಿಸಿದ್ದೀರಿ. ನಿಮ್ಮ ನಿರೀಕ್ಷೆಗಳು ಹುಸಿಯಾಗದಂತೆ ಪ್ರಾಮಾಣಿಕವಾಗಿ ಕೆಲಸ ಮಾಡ್ತೀನಿ. ಬಾದಾಮಿಯಲ್ಲೇ ಮನೆ ಮಾಡುತ್ತೇನೆ. ನಿಮ್ಮ ಸಮಸ್ಯೆ ನನ್ನ ಬಳಿ ನೇರವಾಗಿ ಹೇಳಬಹುದು ಎಂದು ಭರವಸೆ ನೀಡಿದರು. ಇನ್ನು ಸಿದ್ದರಾಮಯ್ಯ ಗ್ರಾಮಕ್ಕೆ ಆಗಮಿಸುತ್ತಿದ್ದಂತೆ ಗ್ರಾಮಸ್ಥರು ಡೊಳ್ಳು ಕುಣಿತದೊಂದಿಗೆ ಬರಮಾಡಿಕೊಂಡರು. ಸಿದ್ದರಾಮಯ್ಯು ಮುಂದೆ ಟಗರನ್ನು ಹೊತ್ತು ಸಾಗಿ ಅಭಿಮಾನ ಮೆರೆದರು. ಮಹಿಳೆಯರು ಆರತಿ ಬೆಳಗಿ ತಮ್ಮ ಕ್ಷೇತ್ರದ ನಾಯಕನಿಗೆ ಸ್ವಾಗತಿಸಿದರು.

Leave a Reply

Your email address will not be published.

Social Media Auto Publish Powered By : XYZScripts.com