ನನ್ನ ಕಚೇರಿಗೆ ಸಾಬರು ಬರೋದೇ ಬೇಡ, ಎಲ್ರೂ ಹಿಂದೂಗಳ ಪರ ಕೆಲ್ಸ ಮಾಡಿ : ವಿವಾದ ಸೃಷ್ಠಿಸಿದ ಬಸವನಗೌಡ ಪಾಟೀಲ್‌

ವಿಜಯಪುರ : ಸಚಿವರಾಗಿ ಪ್ರಮಾಣ ವಚನ ಸ್ವೀಕಾರ ಮಾಡುತ್ತಿದ್ದಂತೆ ಬಸವನಗೌಡ ಪಾಟೀಲ್‌ ಯತ್ನಾಳ್‌ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ನನ್ನನ್ನು ಗೆಲ್ಲಿಸಿದ್ದು ಹಿಂದೂಗಳೇ ಹೊರತು ಮುಸ್ಲೀಮರಲ್ಲ. ನಾನು ಹಿಂದುಗಳಿಂದ ಮಾತ್ರ ಗೆದ್ದಿರುವುದು. ಕಾರ್ಪೋರೇಟರ್‌ಗಳು ಹಿಂದೂಗಳ ಕೆಲಸಗಳನ್ನು ಮಾತ್ರ ಮಾಡಿ ಮುಸ್ಲೀಮರ ಕೆಲಸಗಳನ್ನು ಮಾಡಬೇಡಿ ಎಂದಿದ್ದಾರೆ.

ಅಷ್ಟೇ ಅಲ್ಲದೆ, ನನ್ನ ಕಚೇರಿಗೆ ಮುಸ್ಲೀಮರು, ಬುರ್ಕಾ ಧರಿಸಿದವರು ಬರುವುದೇ ಬೇಡ. ಕೇವಲ ಹಿಂದೂಗಳು ಮಾತ್ರ ಬನ್ನಿ. ನಿಮಗೆ ಕೆಲಸ ಮಾಡಿಕೊಡುತ್ತೇನೆ. ಸಾಬರು ನನಗೆ ವೋಟ್ ಹಾಕೋದು ಬೇಡ ಎಂದು ಮೊದಲೇ ಹೇಳಿದ್ದೆ. ನನಗೆ ಮತ ಹಾಕಿದ್ದು ಕೇವಲ ಹಿಂದೂಗಳು ಮಾತ್ರ. ಅದಕ್ಕಾಗಿ ಹಿಂದೂಗಳ ಕೆಲಸವನ್ನು ಮಾತ್ರ ಮಾಡಿಕೊಡುತ್ತೇನೆ ಎಂದಿದ್ದಾರೆ.

ನನ್ನ ಕಚೇರಿ ಸುತ್ತ ಮುತ್ತ ಕೂಡಾ ಟೋಪಿ ಹಾಕಿದವರು, ಗಡ್ಡ ಬಿಟ್ಟವರು, ಬುರ್ಖಾ ಹಾಕಿದವರು ಬರದಂತೆ ನೋಡಿಕೊಳ್ಳಿ ಎಂದು ನಾನು ಕಾರ್ಯಕರ್ತರಿಗೆ ತಿಳಿಸಿದ್ದೇನೆ. ಎಲೆಕ್ಷನ್ ‌ಮುಗಿಯುವವರೆಗೂ ಅವರ ಮುಖವೂ ನೋಡುವದು ಬೇಡಾ ಎಂದು ಹೇಳಿದ್ದೆ. ಎಲ್ಲಿ ಬಾಳೆ ಹಣ್ಣಿನ ಗಾಡಿ ಇರತ್ತೊ ಅಲ್ಲಿ ನಿಮ್ಮದು ಒಂದು ವಾಹನ ಇರಬೇಕು ಎಂದು ಹೇಳಿದ್ದೇನೆ ಎಂದು ಭಾಷಣದಲ್ಲಿ ಹೇಳಿದ್ದಾರೆ.

Leave a Reply

Your email address will not be published.