ಮೈತ್ರಿ ಸರ್ಕಾರದಿಂದ ಸದ್ಯದಲ್ಲೇ 1 ವಿಕೆಟ್ ಔಟ್‌ : ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಜೆಡಿಎಸ್ ನಾಯಕ !!

ತುಮಕೂರು : ಸಚಿವ ಸ್ಥಾನ ವಂಚಿತ ಶಾಸಕ ಬಿ. ಸತ್ಯನಾರಾಯಣ  ಸ್ಫೋಟಕ ಹೇಳಿಕೆಯೊಂದನ್ನು ನೀಡಿದ್ದಾರೆ.

ದೇವೇಗೌಡರು ಉಪಸಭಾಪತಿ ಸ್ಥಾನ ನೀಡುವ ಭರವಸೆ ಕೊಟ್ಟಿದ್ದಾರೆ. ಉಪ ಸಭಾಪತಿ ಸ್ಥಾನ ಒಪ್ಪಿಕೊಳ್ಳದಂತೆ ಸಮಾಜ ಬಾಂಧವರು ಹೇಳಿದ್ದಾರೆ.ಹಾಗಾಗಿ ಸದ್ಯ ಉಪಸಭಾಪತಿ ಸ್ಥಾನ ಒಪ್ಪಿಕೊಳ್ಳುವುದಿಲ್ಲ ಎಂದು ಸತ್ಯನಾರಾಯಣ ಹೇಳಿದ್ದಾರೆ.

ಜೊತೆಗೆ ಉಪಸಭಾಪತಿ ಸ್ಥಾನ ಹೊರತುಪಡಿಸಿ. ಒಂದು ತಿಂಗಳಲ್ಲಿ ಸಚಿವ ಸ್ಥಾನ ನೀಡುವ ಭರವಸೆ ಕೊಟ್ಟಿದ್ದಾರೆ. ಒಂದು ತಿಂಗಳಲ್ಲಿ ಜೆಡಿಎಸ್ ಸಚಿವರೊಬ್ಬರು ರಾಜೀನಾಮೆ ಕೊಡಲಿದ್ದಾರೆ ಎಂದು ಮುಖ್ಯಮಂತ್ರಿಗಳು ಹೇಳಿದ್ದಾರೆ. ಆ ಸಚಿವ‌ ಸ್ಥಾನ ನನಗೆ ನೀಡುವ ‌ಭರವಸೆ ಇದೆ ಎಂದು ಸ್ಫೋಟಕ ಹೇಳಿಕೆ ನೀಡಿದ್ದಾರೆ.  ಹಾಗಾಗಿ ನಾನು ಸದ್ಯ ಶಾಸಕಗಿರಿಗೆ ತೃಪ್ತಿಪಟ್ಟುಕೊಂಡು ಮುಂದುವರೆಯುತ್ತೇನೆ. ಕುಮಾರಸ್ವಾಮಿ ಸಿಎಂ ಆಗಿ ಮುಂದುವರೆಯಬೇಕು ಅನ್ನೋದು ನನ್ನ ಆಶಯ. ಬಿಜೆಪಿಗೆ ಹೋಗುವ ಪ್ರಶ್ನೆಯೇ ಇಲ್ಲ. ನನಗೆ ಸಚಿವ ಸ್ಥಾನ ಸಿಗದಂತೆ ಕೊನೆ ಘಳಿಗೆಯಲ್ಲಿ ಕುತಂತ್ರ ನಡೆದಿರುವುದು ಸತ್ಯ. ಅದನ್ನು ಬಹಿರಂಗವಾಗಿ ಹೇಳಲು ಸಾದ್ಯವಿಲ್ಲ ಎಂದಿದ್ದಾರೆ.

Leave a Reply

Your email address will not be published.