ಮೋದಿ ಪ್ರಿಯರು ನಮಗೆ ಖಂಡಿತ ಮತ ನೀಡುತ್ತಾರೆ : ಆಯನೂರು ಮಂಜುನಾಥ್‌

ಶಿವಮೊಗ್ಗ : ನಾವು ವಿಷಯಾಧಾರಿತವಾಗಿ ಚುನಾವಣೆ ಎದುರಿಸುತ್ತಿದ್ದೇವೆ. ನಮ್ಮದು ಬೇರೆ ಪಕ್ಷಗಳ ರೀತಿ ಡೋಂಗಿ ಪಕ್ಷವಲ್ಲ. ಮೋದಿ ಪ್ರಿಯರು ನಮಗೆ ಮತ ನೀಡುತ್ತಾರೆ ಎಂಬ ವಿಶ್ವಾಸ ನಮಗಿದೆ ಎಂದು ವಿಧಾನಪರಿಷತ್ ನೈರುತ್ಯ ಪದವೀಧರರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಆಯನೂರು ಮಂಜುನಾಥ್ ಹೇಳಿದ್ದಾರೆ.

ಡಿ.ಎಚ್.ಶಂಕರಮೂರ್ತಿಯವರು ಶಿಕ್ಷಣ ಸಚಿವರಾಗಿದ್ದಾಗ ಪ್ರತಿ ಹೋಬಳಿಯಲ್ಲಿಯೂ ಪದವಿ ಕಾಲೇಜುಗಳು ಆರಂಭಗೊಂಡವು. ಈ ಹಿನ್ನೆಲೆಯಲ್ಲಿ ಪದವೀಧರರ ಕ್ಷೇತ್ರದಲ್ಲಿ ನಾವು ಗೆದ್ದೇ ಗೆಲ್ಲುತ್ತೇವೆ. ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಅತಿಥಿ ಉಪನ್ಯಾಸಕರು ಬೀದಿಗೆ ಬಿದ್ದರು. ಆಗ ಕಾಂಗ್ರೆಸ್ ಅಭ್ಯರ್ಥಿ ಎಲ್ಲಿದ್ದರು ಎಂದು ಪ್ರಶ್ನಿಸಿದ್ದಲ್ಲದೆ, ಹದಿನೈದು ವರ್ಷ ಕೆಲಸ ಮಾಡಿದ ಅತಿಥಿ ಉಪನ್ಯಾಸಕರ ವೇತನ ಹೆಚ್ಚಿಸದೆ ಅವರನ್ನು ಬೀದಿಗೆ ತಳ್ಳಿದ್ದು ಕಾಂಗ್ರೆಸ್ ಸರ್ಕಾರ ಎಂದು ದೂರಿದರು.

ಕಾಂಗ್ರೆಸ್ ಅಭ್ಯರ್ಥಿ ಮೊನ್ನೆ ಮೊನ್ನೆವರೆಗೂ ಡಿ‌.ಎಚ್.ಶಂಕರಮೂರ್ತಿಯವರನ್ನು ತೆಗಳಿಕೊಂಡು ಓಡಾಡುತ್ತಿದ್ದರು. ಇದೀಗ ಶಂಕರಮೂರ್ತಿಯವರನ್ನು ಸಜ್ಜನ ರಾಜಕಾರಣಿ ಎಂದು ಹಾಡಿಹೊಗಳುತ್ತಿದ್ದಾರೆ. ಅನೈತಿಕ ನೆಲೆಗಟ್ಟಿನಲ್ಲಿ ಚುನಾವಣೆ ನಡೆಸುವವರು ಕಾಂಗ್ರೆಸ್ಸಿನವರು ಎಂದು ಕಾಂಗ್ರೆಸ್‌ ವಿರುದ್ಧ ಕಿಡಿಕಾರಿದ್ದಾರೆ.

 

Leave a Reply

Your email address will not be published.