ಅಸಲಿ ಆಟ ಈಗ ಶುರು : ಕಾಂಗ್ರೆಸ್‌ನ ಒಂದೊಂದೇ ವಿಕೆಟ್ ಪತನಕ್ಕೆ ಹೊಂಚು ಹಾಕಿ ಕುಳಿತ ಬಿಜೆಪಿ !

ಶಿವಮೊಗ್ಗ : ಸಂಪುಟ ವಿಸ್ತರಣೆಯಾಗುತ್ತಿದ್ದಂತೆ  ಶಾಸಕರನ್ನು ಸೆಳೆಯಲು ಕಾದು ಕುಳಿತಿರುವ ಬಿಜೆಪಿ ಈಗ ತನ್ನ ಅಸ್ತ್ರವನ್ನು ಬಳಸಿಕೊಂಡಿದೆ.

ಸಂಪುಟದಲ್ಲಿ ಸಚಿವ ಸ್ಥಾನ ಸಿಗದ ಹಿನ್ನೆಲೆಯಲ್ಲಿ ಅಸಮಾಧಾನಗೊಂಡಿರುವ ಕಾಂಗ್ರೆಸ್‌ ನಾಯಕರಿಗೆ ಬಿಜೆಪಿ ನಾಯಕರು ಬಹಿರಂಗವಾಗಿಯೇ ಪಕ್ಷಕ್ಕೆ ಬರುವಂತೆ ಆಹ್ವಾನ ನೀಡುತ್ತಿದ್ದಾರೆ.

ಅಂತೆಯೇ ಸಂಪುಟ ವಿಸ್ತರಣೆ ನಂತರ ಕಾಂಗ್ರೆಸ್ ಶಾಸಕರು ನಿರಾಸೆಯಾಗಿದ್ದಾರೆ. ಕಾಂಗ್ರೆಸ್ ಪಕ್ಷವೇ ಬೆತ್ತಲೆಯಾಗಿದೆ ಎಂದು ಕೆ.ಎಸ್‌ ಈಶ್ವರಪ್ಪವಾಗ್ದಾಳಿ ನಡೆಸಿದ್ದಾರೆ. ಬಿಎಸ್ ವೈ ಮುಖ್ಯಮಂತ್ರಿಯಾಗಿ ಬಹುಮತ ಸಾಬೀತಿನ ವೇಳೆ ಕಾಂಗ್ರೆಸ್ ನ ಕೆಲ ಶಾಸಕರು ಬೆಂಬಲ ನೀಡಿದ್ದರು. ಕಾಂಗ್ರೆಸ್ ನವರು ಶಾಸಕರನ್ನ ಬಂಧನದಲ್ಲಿ ಇಟ್ಟುಕೊಂಡಿದ್ದರು. ಒಂದು ದಿನದ ಒಳಗೆ ಬಹುಮತ ಸಾಬೀತು ಪಡಿಸಲು ಆಗಲಿಲ್ಲ.ಕಾಂಗ್ರೆಸ್ ನಲ್ಲಿ ಮಂತ್ರಿಸ್ಥಾನ ಸಿಕ್ಕಿಲ್ಲ ಅಂತ ನಿರಾಸೆಯಾಗಿಲ್ಲ. ಕಾಂಗ್ರೆಸಿಗರ ವರ್ತನೆಯಿಂದ ಶಾಸಕರು ಬೇಸತ್ತಿದ್ದಾರೆ ಎಂದು ಕಾಂಗ್ರೆಸ್‌ನ ಅಸಮಾಧಾನ ಶಾಸಕರ ಪರ ಈಶ್ವರಪ್ಪ ಬ್ಯಾಟಿಂಗ್ ಮಾಡಿದ್ದಾರೆ.

ಅಲ್ಲದೆ ಪ್ರಾಮಾಣಿಕ ಕಾಂಗ್ರೆಸ್ ಶಾಸಕರು ಬಿಜೆಪಿಗೆ ಬರುವಂತೆ ಆಹ್ವಾನಿಸಿದ್ದು, ನರೇಂದ್ರ ಮೋದಿಯ ಜೊತೆ ಸೇರಿ ರಾಜ್ಯ ದೇಶ ಕಟ್ಟೋಣ ಬನ್ನಿ ಎಂದು ಈಶ್ವರಪ್ಪ ಕರೆ ನೀಡಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com