RSS & ಬಿಜೆಪಿಯವರು ಇಫ್ತಾರ್ ಕೂಟ ಆಯೋಜಿಸುವುದು ಒಂದು ಜೋಕ್ : ಶರದ್ ಪವಾರ್

‘ ರಾಷ್ಟ್ರೀಯ ಸ್ವಯಂ ಸೇವಕ ಸಂಘ ಹಾಗೂ ಭಾರತೀಯ ಜನತಾ ಪಕ್ಷದವರು ರಂಜಾನ್ ವೇಳೆ ಮುಸ್ಲಿಂ ಬಾಂಧವರಿಗಾಗಿ ಇಫ್ತಾರ್ ಕೂಟವನ್ನು ಆಯೋಜಿಸುವುದು ಒಂದು ಜೋಕ್, ಅಷ್ಟೇ ಹೊರತು ಮತ್ತೇನೂ ಅಲ್ಲ ‘ ಎಂದು ಎನಸ್ ಸಿಪಿ ಅಧ್ಯಕ್ಷ ಶರದ್ ಪವಾರ್ ಹೇಳಿದ್ದಾರೆ.

ಬುಧವಾರ ಸಾಯಂಕಾಲ ಮುಂಬೈನ ಹಜ್ ಹೌಸ್ ನಲ್ಲಿ ಶರದ್ ಪವಾರ್ ಇಫ್ತಾರ್ ಕೂಟವನ್ನು ಏರ್ಪಡಿಸಿದ್ದರು. ಔತಣ ಕೂಟದಲ್ಲಿ ನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿಯ ಹಲವು ಮುಖಂಡರು, ಸದಸ್ಯರು ಹಾಗೂ ಸ್ಥಳೀಯ ಮುಸ್ಲಿಂ ಸಮುದಾಯದ ಜನ ಆಗಮಿಸಿದ್ದರು.

ಇಫ್ತಾರ್ ಕೂಟಕ್ಕೆಂದು ಸೇರಿದ್ದ ಜನರನ್ನು ಉದ್ದೇಶಿಸಿ ಮಾತನಾಡಿ ಪರೋಕ್ಷವಾಗಿ ಆರ್ ಎಸ್ ಎಸ್ ಹಾಗೂ ಬಿಜೆಪಿ ವಿರುದ್ಧ ದಾಳಿ ನಡೆಸಿದ ಶರದ್ ಪವಾರ್ ‘ ನಾಗಪುರ ಮೂಲದ ಸಂಸ್ಥೆಯೊಂದು ಹಾಗೂ ಸಮಾಜದ ಕೋಮು ಸೌಹಾರ್ದವನ್ನು ಕದಡುವ ರಾಜಕೀಯ ಪಕ್ಷವೊಂದು ಸೇರಿಕೊಂಡು ಮುಸ್ಲಿಮರಿಗಾಗಿ ಇಫ್ತಾರ್ ಏರ್ಪಡಿಸಿದ್ದಾರೆಂದು ಪತ್ರಿಕೆಗಳಲ್ಲಿ ಓದಿದೆ. ಅದು ಒಂದು ಜೋಕ್ ಬಿಟ್ಟರೆ ಬೇರೇನೂ ಅಲ್ಲ ‘ ಎಂದಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com