Cricket : ನ್ಯೂಜಿಲೆಂಡ್ ಮುಖ್ಯ ಕೋಚ್ ಹುದ್ದೆಯಿಂದ ಕೆಳಗಿಳಿದ ಮೈಕ್ ಹೆಸ್ಸನ್..

ನ್ಯೂಜಿಲೆಂಡ್ ಕ್ರಿಕೆಟ್ ತಂಡದ ಮುಖ್ಯ ಕೋಚ್ ಹುದ್ದೆಯಿಂದ ಮೈಕ್ ಹೆಸ್ಸನ್ ಕೆಳಗಿಳಿದಿದ್ದಾರೆ. ಕೌಟುಂಬಿಕ ಕಾರಣಗಳ ಹಿನ್ನೆಲೆಯಲ್ಲಿ ಕೋಚ್ ಹುದ್ದೆಯಿಂಧ ಹಿಂದೆ ಸರಿಯುವ ನಿರ್ಧಾರಕ್ಕೆ ಬಂದಿರುವುದಾಗಿ 43 ವರ್ಷದ ಮೈಕ್ ಹೆಸನ್ ತಿಳಿಸಿದ್ದಾರೆ. ನ್ಯೂಜಿಲೆಂಡ್ ಕ್ರಿಕೆಟ್ ಬೋರ್ಡ್ ಗೆ ರಾಜೀನಾಮೆ ಮೈಕ್ ಸಲ್ಲಿಸಿದ್ದು, ಜುಲೈ 1 ರವರೆಗೆ ಕೋಚ್ ಆಗಿ ಮುಂದುವರೆಯಲಿದ್ದಾರೆ.

ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿರುವ ಮೈಕ್ ‘ ಮುಂಬರುವ 12 ತಿಂಗಳುಗಳ ಅವಧಿಯಲ್ಲಿ ಏನು ಅಗತ್ಯವಿದೆ ಎಂದು ನನಗೆ ತಿಳಿದಿದೆ. ಪ್ರಾಮಾಣಿಕವಾಗಿ ಹೇಳುವುದಾದರೆ, ಕಿವೀಸ್ ತಂಡಕ್ಕೆ ಯೋಗ್ಯವಾದ ಮಾರ್ಗದರ್ಶನ ಮಾಡುವ ಸಾಮರ್ಥ್ಯ ನನ್ನಲ್ಲಿದೆ ಎಂದು ಅನಿಸುತ್ತಿಲ್ಲ ‘ ಎಂದು ಹೇಳಿದ್ದಾರೆ.

Related image

ಕಳೆದ 6 ವರ್ಷಗಳಿಂದಲೂ ನ್ಯೂಜಿಲೆಂಡ್ ತಂಡದ ಮುಖ್ಯ ಕೋಚ್ ಜವಾಬ್ದಾರಿಯನ್ನು ಮೈಕ್ ನಿಭಾಯಿಸಿದ್ದರು. ಮೈಕ್ ಕೋಚ್ ಆಗಿದ್ದ ಅವಧಿಯಲ್ಲಿಯೇ ನ್ಯೂಜಿಲೆಂಡ್ 2015ರಲ್ಲಿ ಪ್ರಥಮ ಬಾರಿಗೆ ವಿಶ್ವಕಪ್ ಫೈನಲ್ ತಲುಪಿದ ಸಾಧನೆ ಮಾಡಿತ್ತು.

‘ ಮೈಕ್ ಹೆಸ್ಸನ್ ಅವರು ಕಿವೀಸ್ ತಂಡ ಹೊಂದಿದ್ದ ಅತ್ಯುತ್ತಮ ಕೋಚ್ ಆಗಿದ್ದಾರೆ. ಮೂರು ಮಾದರಿಗಳಲ್ಲಿಯೂ ಯಶಸ್ವಿಯಾಗಿ ಮುನ್ನಡೆಸಲು ಕಾರಣರಾಗಿದ್ದರು ‘ ಎಂದು ಆರಂಭಿಕ ಬ್ಯಾಟ್ಸಮನ್ ಬ್ರೆಂಡನ್ ಮೆಕ್ಕಲಂ ಹೇಳಿದ್ದಾರೆ.

 

Leave a Reply

Your email address will not be published.

Social Media Auto Publish Powered By : XYZScripts.com