ನಮ್ಮ ನಾಯಕ ಕುಮಾರಣ್ಣ. ಈಗ್ಲೆ ರಿಸೈನ್‌ ಮಾಡು ಅಂದ್ರೆ ಮಾಡೋಕೆ ರೆಡಿ ಇದ್ದೀನಿ ಎಂದ JDS ನಾಯಕ !

ಮಂಡ್ಯ : ನಮ್ಮ ನಾಯಕ ಕುಮಾರಣ್ಣ. ಅವರು ಈ ಕ್ಷಣದಲ್ಲಿ ಕರೆ ಮಾಡಿ ರಿಸೈನ್ ಮಾಡು ಅಂದ್ರು ಮಾಡೋಕೆ ರೆಡಿ ಇದ್ದೇನೆ ಎಂದು ನೂತನ ಸಚಿವ ಸಾ.ರಾ.ಮಹೇಶ್ ಹೇಳಿದ್ದಾರೆ.

ಮಂಡ್ಯದಲ್ಲಿ ಮಾತನಾಡಿದ ಅವರು, ಸಚಿವ ಸ್ಥಾನ ವಂಚಿತ ಶಿರಾ ಜೆಡಿಎಸ್ ಶಾಸಕ ಬಿ.ಸತ್ಯನಾರಾಯಣ, ಒಂದು ತಿಂಗಳಲ್ಲಿ ಸಚಿವ ಸ್ಥಾನ ನೀಡುವ ಭರವಸೆ ಕೊಟ್ಟಿದ್ದಾರೆ. ಒಂದು ತಿಂಗಳಲ್ಲಿ ಜೆಡಿಎಸ್ ಸಚಿವರೊಬ್ಬರು ರಾಜೀನಾಮೆ ಕೊಡಲಿದ್ದಾರೆ ಎಂದು ಮುಖ್ಯಮಂತ್ರಿಗಳು ಹೇಳಿದ್ದಾರೆ. ಆ ಸಚಿವ‌ ಸ್ಥಾನ ನನಗೆ ನೀಡುವ ‌ಭರವಸೆ ಇದೆ ಎಂದಿದ್ದರು. ಈ ಬಗ್ಗೆ ಮಂಡ್ಯದಲ್ಲಿ ಪ್ರತಿಕ್ರಿಯಿಸಿರೋ ಸಾ.ರಾ.ಮಹೇಶ್, ಬೇರೆಯವರ ಬಗ್ಗೆ ನನಗೆ ಗೊತ್ತಿಲ್ಲ. ನಮ್ಮ ನಾಯಕ ಕುಮಾರಣ್ಣ. ಪಕ್ಷದ ಹಿತದೃಷ್ಟಿಯಿಂದ ಅವರು ಹೇಳಿದ್ರೆ ಇಂದೇ ರಾಜೀನಾಮೆ ಕೊಡುವುದಾಗಿ ಹೇಳಿದ್ದಾರೆ. ಇನ್ನು ಇಂತಹದ್ದೇ ಖಾತೆ ನೀಡಿ ಎಂದು ನಾನು ಯಾವುದೇ ಬೇಡಿಕೆ ಇಟ್ಟಿಲ್ಲ. ಹೆಚ್ಡಿಕೆ ಯಾವುದೇ ಜವಾಬ್ದಾರಿ ನೀಡಿದರೂ ನಿರ್ವಹಿಸುತ್ತೇನೆ. ನಾಳೆ ಸಚಿವರ ಖಾತೆ ಹಂಚಿಕೆ ಸಾಧ್ಯತೆ ಇದ್ದು, ಐದು ವರ್ಷ ಕುಮಾರಸ್ವಾಮಿ ಅವರೇ ಸಿಎಂ ಆಗಿರ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com