ಈಗ ಚುನಾವಣೆ ನಡೆದರೂ ನಾವು 150 ಸೀಟು ಗೆಲ್ಲೋದು ಗ್ಯಾರೆಂಟಿ, ಸವಾಲಿಗೆ ರೆಡೀನಾ ಎಂದ ಬಿಜೆಪಿ ನಾಯಕ ಶ್ರೀರಾಮುಲು !!

ಚಿತ್ರದುರ್ಗ : ಕುಮಾರಸ್ವಾಮಿ ಮೊದಲು ನಾಡಿನ ಜನರ ಆಶಿರ್ವಾದಿಂದ ಮುಖ್ಯಮಂತ್ರಿ ಆಗಿದ್ದೆ ಅಂದಿದ್ದರು. ಈಗ ಮಾತು ಬದಲಾಗಿದೆ.ರಾಜ್ಯದ ಇತಿಹಾಸದಲ್ಲಿ ಪ್ರಾದೇಶಿಕ ಪಕ್ಷಗಳಿಗೆ ಪೂರ್ಣ ಬಹುಮತ ಬಂದಿದ್ದೇ ಇಲ್ಲ ಎಂದು ಮುರುಘಾ ಮಠದಲ್ಲಿ ಮೊಳಕಾಲ್ಮೂರು ಕ್ಷೇತ್ರದ ಶಾಸಕ ಬಿ.ಶ್ರೀರಾಮುಲು ಹೇಳಿಕೆ ನೀಡಿದ್ದಾರೆ.

ಮತ್ತೆ ಕುಮಾಸ್ವಾಮಿ ವಿರುದ್ಧ ಗುಡುಗಿಡ ಅವರು, ಸಚಿವ ಸಂಪುಟ ಗೊಂದಲವನ್ನು ರಾಜ್ಯದ ಜನ ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ. ಈ ಸರ್ಕಾರಕ್ಕೆ ಆಯಸ್ಸು ಇಲ್ಲ. ಅವರವರ ಮಧ್ಯೆ ಜಗಳ, ಕಿತ್ತಾಟ ನಡೆಯುತ್ತಿದೆ. ನಾವು ಚುನಾವಣೆಗೆ ಹೋಗಲು ರೆಡಿ ಇದ್ದೇವೆ. ಈಗ ಚುನಾವಣೆ ನಡೆದರು 150 ಸ್ಥಾನ ಗೆಲ್ಲುತ್ತೇವೆ. ಆಡಳಿತ ಪಕ್ಷ ಏನೇ ತೊಂದರೆ ಮಾಡಿದರು ಹೋರಾಟ ಮಾಡಲು ಸಿದ್ದರಿದ್ದೇವೆ ಎಂದಿದ್ದಾರೆ.

ಸಾಲ ಮನ್ನಾ ವಿಚಾರದಲ್ಲಿ ಕುಮಾರಸ್ವಾಮಿ ಜನರ ಕಿವಿಯಲ್ಲಿ ಹೂ ಇಡಲು ಮುಂದಾಗಿದ್ದಾರೆ. ನಮ್ಮ ಮೊದಲ ಆದ್ಯತೆ ಸಾಲಮನ್ನಾ. ಇಲ್ಲವಾದರೆ ಹೋರಾಟ ಮಾಡುತ್ತೇವೆ. ರಾಷ್ಟ್ರೀಯ ನಾಯಕರು ಹಾಗೂ ರಾಜ್ಯ ನಾಯಕರು ಒಮ್ಮತದ ತೀರ್ಮಾನಕ್ಕೆ ಬರುತ್ತೇವೆ. ಬಿಜೆಪಿ ಹೈಕಮಾಂಡ್ ತೀರ್ಮಾನವೇ ಅಂತಿಮ. ಒಮ್ಮೆ ಹೋರಾಟ ಪ್ರಾರಂಭಿಸಿದರೆ ಸಾಲಮನ್ನಾ ಆಗುವವರೆಗೂ ಬಿಡುವುದಿಲ್ಲ ಎಂದಿದ್ದಾರೆ.

ಕಾಂಗ್ರೆಸ್ ನ ನಾಯಕರು ಹಿರಿಯರಿದ್ದಾರೆ. ಅವರು ಯೋಚನೆ ಮಾಡಿ ಯಡಿಯೂರಪ್ಪ , ಅಮಿತ್ ಷಾ ಜೊತೆಗೆ ಮಾತನಾಡಲಿ. ನಮ್ಮೊಂದಿಗೆ ಯಾರು ಸಂಪರ್ಕದಲ್ಲಿಲ್ಲ ಎಂದು ಮತ್ತೆ ಕಾಂಗ್ರೆಸ್‌ ಪರ ಮೃಧು ಧೋರಣೆ ತಳೆ ದಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com