ಸಂಬಳ ಹೆಚ್ಚಾದ ಬೆನ್ನಲ್ಲೇ ರಾಜ್ಯ ಸರ್ಕಾರಿ ನೌಕರರಿಗೆ HDK ಸರ್ಕಾರದಿಂದ ಮತ್ತೊಂದು ಗುಡ್‌ನ್ಯೂಸ್‌ ಏನದು ?

ಬೆಂಗಳೂರು : ಸರ್ಕಾರಿ ಉದ್ಯೋಗಿಗಳಿಗೆ ಮತ್ತೊಂದು ಗುಡ್‌ ನ್ಯೂಸ್‌ ಕಾದಿದೆ. ಈ ಹಿಂದಿದ್ದ ಸಿದ್ದರಾಮಯ್ಯ ಸರ್ಕಾರ ಸರ್ಕಾರಿ ನೌಕರರ ಸಂಬಳ ಹೆಚ್ಚಿಸಿದ್ದು, ಇದಾದ ಬೆನ್ನಲ್ಲೇ ವಾರಕ್ಕೆ ಐದು ದಿನ ಮಾತ್ರ ಕೆಲಸ ಎಂದು ಹೇಳಲಾಗುತ್ತಿದೆ.

ಸರ್ಕಾರಿ ಕಚೇರಿಗಳಲ್ಲಿ ವಾರದಲ್ಲಿ ಐದು ದಿನ ಕೆಲಸಕ್ಕೆ ಸೀಮಿತಗೊಳಿಸುವ ಚಿಂತನೆಯನ್ನು ರಾಜ್ಯ ಸರ್ಕಾರ ಆರಂಭಿಸಿದೆ ಎನ್ನಲಾಗುತ್ತಿದೆ. ಸರ್ಕಾರಿ ನೌಕಕರಲ್ಲಿ ಕಾರ್ಯಕ್ಷಮತೆ, ಕ್ರಿಯಾಶೀಲತೆ ಹೆಚ್ಚಿಸುವ ನಿಟ್ಟಿನಲ್ಲಿ ಈ ಹೊಸ ಚಿಂತನೆ ರೂಪುಗೊಳಿಸಲಾಗುತ್ತಿದೆ.  ಮುಂದುವರೆದಿರುವ ರಾಷ್ಟ್ರಗಳು ಹಾಗೂ ಇಲ್ಲಿನ ಬಹುರಾಷ್ಟ್ರೀಯ ಕಂಪನಿಗಳಲ್ಲಿರುವ ವಾರದಲ್ಲಿ ಐದು ದಿನ ಕೆಲಸ ವ್ಯವಸ್ಥೆಯನ್ನು ರಾಜ್ಯ ಸರ್ಕಾರಿ ನೌಕರರಿಗೂ ಅನ್ವಯಿಸುವ ಚಿಂತನೆಯನ್ನು ಎಚ್‌ಡಿ ಕುಮಾರಸ್ವಾಮಿ ಮಾಡಿದ್ದಾರೆ ಎಂದು ಉನ್ನತ ಮೂಲಗಳು ಏನ್‌ಸುದ್ದಿಗೆ ತಿಳಿಸಿವೆ.


ಆದರೆ ಸೋಮವಾರದಿಂದ ಶುಕ್ರವಾದವರೆಗೆ ಕೆಲಸ ಮಾಡಿ ಶನಿವಾರ ಮತ್ತು ಭಾನುವಾರ ಖುಷಿಯಾಗಿರಲು ಕೆಲವು ಷರತ್ತುಗಳನ್ನು ವಿಧಿಸಲಾಗುತ್ತದೆ.  ಕೆಲವು ಜಯಂತಿಗಳಂದು ರಜೆಯನ್ನು ರದ್ದುಗೊಳಿಸಲಾಗುತ್ತದೆ. ಬದಲಿಗೆ ಆಯಾ ಸಮುದಾಯದವರು ಬೇಕಾದರೆ ನಿರ್ಬಂಧಿತ ರಜೆ ಪಡೆಯಲು ಅವಕಾಶ ಕಲ್ಪಿಸಲಾಗುತ್ತದೆ. ಸಾಮಾನ್ಯ ದಿನಗಳ ಕಚೇರಿ ಕೆಲಸದ ಅವಧಿಯನ್ನು ಕನಿಷ್ಠ 1 ತಾಸಿನಿಂದ ಒಂದೂವರೆ ಗಂಟೆ ಕಾಲ ವಿಸ್ತರಣೆ ಮಾಡಲಾಗುತ್ತದೆ.

ಸದ್ಯ ರಾಜ್ಯ ಸರ್ಕಾರಿ ನೌಕರರ ಕೆಲಸದ ಸಮಯ ಬೆಳಗ್ಗೆ 10.30ರಿಂದ ಸಂಜೆ 5.30. ಮಧ್ಯಾಹ್ನ ಒಂದು ತಾಸು ಭೋಜನ ವಿರಾಮ. ಅಂದರೆ ದಿನಕ್ಕೆ ಆರು ಗಂಟೆ ಕೆಲಸ ಮಾಡಬೇಕಿದೆ ಇದನ್ನು ಒಂದರಿಂದ ಒಂದೂವರೆ ಗಂಟೆ ಹೆಚ್ಚಳ ಮಾಡಲಾಗುತ್ತದೆ ಎಂದು ತಿಳಿದು ಬಂದಿದೆ.

2 thoughts on “ಸಂಬಳ ಹೆಚ್ಚಾದ ಬೆನ್ನಲ್ಲೇ ರಾಜ್ಯ ಸರ್ಕಾರಿ ನೌಕರರಿಗೆ HDK ಸರ್ಕಾರದಿಂದ ಮತ್ತೊಂದು ಗುಡ್‌ನ್ಯೂಸ್‌ ಏನದು ?

Leave a Reply

Your email address will not be published.

Social Media Auto Publish Powered By : XYZScripts.com