ಅತೃಪ್ತ ಶಾಸಕರನ್ನು ಸಮಾಧಾನ ಪಡಿಸಲು ಪರಮೇಶ್ವರ್‌ ಯತ್ನ….ಸಿಗುತ್ತಾ ಯಶಸ್ಸು ?

ಬೆಂಗಳೂರು : ಯಾವುದೇ ದುರುದ್ದೇಶದಿಂದ ಯಾರಿಗೂ ಮಂತ್ರಿ ಪದವಿಯನ್ನ ಹೈಕಮಾಂಡ್ ತಪ್ಪಿಸಿಲ್ಲ. ಯಾರನ್ನೋ ಬಿಡುವುದು, ಯಾರನ್ನೋ ತೆಗೆದುಕೊಳ್ಳೊದನ್ನು ದುರುದ್ದೇಶದಿಂದ ಹೈಕಮಾಂಡ್, ನಾನಾಗಲಿ, ಸಿದ್ದರಾಮಯ್ಯನವರಾಗಲಿ ಮಾಡಿಲ್ಲ ಎಂದು  ಉಪಮುಖ್ಯಮಂತ್ರಿ ಜಿ.ಪರಮೇಶ್ವರ್ ಹೇಳಿದ್ದಾರೆ.

ಕಾಂಗ್ರೆಸ್ ಪಕ್ಷದಲ್ಲಿ ಅರ್ಹತೆ ಇರುವ ಬಹಳಷ್ಟು ಜನರಿದ್ದಾರೆ ಅಂತಾ ನನಗೂ ಅನಿಸುತ್ತೆ. ಅವ್ರಿಗೆ ಮಂತ್ರಿ ಪದವಿ ಸಿಗಬೇಕಾಗಿತ್ತು. ಆದ್ರೆ ಹೈಕಮಾಂಡ್ ಅನೇಕ ಕಾರಣಗಳಿಂದ ಇಂತಹ ಕ್ರಮಕೈಗೊಂಡಿದೆ. ಆದ್ರೆ ಇದು ವಿಶೇಷ ಸಂದರ್ಭ, ಮೈತ್ರಿ ಸರ್ಕಾರವಿದೆ, ಎಲ್ಲರೂ ಸಹಕರಿಸಬೇಕು ಎಂದು ವಿನಂತಿ ಮಾಡುತ್ತೇನೆ. ಮುಂದೆ ಲೋಕಸಭಾ ಚುನಾವಣೆಯನ್ನ ಪಕ್ಷದ ಎಲ್ಲರೂ ಒಟ್ಟಾಗಿ ಎದುರಿಸಿ ಗೆಲ್ಲಬೇಕಿದೆಅಸಮಾಧಾನ ಹೊಂದಿರುವ ಪ್ರತಿಯೊಬ್ಬರೊಂದಿಗೆ ಪರ್ಸನಲ್ ಆಗಿ ಮಾತನಾಡುತ್ತೇನೆ ಎಂದು ಪರಮೇಶ್ವರ್‌ ಹೇಳಿದ್ದಾರೆ.

Leave a Reply

Your email address will not be published.