ಹಂತಕರ ಹಿಟ್‌ಲಿಸ್ಟ್‌ನಲ್ಲಿ ಕರ್ನಾಟಕದ ಐವರು ಚಿಂತಕರು : ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಗೌರಿ ಹತ್ಯೆ ಆರೋಪಿ

ಬೆಂಗಳೂರು : ಪತ್ರಕರ್ತೆ ಗೌರಿ ಲಂಕೇಶ್‍ ಹತ್ಯೆ ಪ್ರಕರಣದಲ್ಲಿ ಬಂಧಿತನಾಗಿರುವ ಪುಣೆ ಮೂಲದ 37ರ ಹರೆಯದ ಆರೋಪಿ ಅಮುಲ್‍ ಕಾಲೆ ವಿಚಾರಣೆ ವೇಳೆ ಕರ್ನಾಟಕದ ಐದು ಮಂದಿ ಬುದ್ದಿ ಜೀವಿಗಳು ಹಿಟ್ ಲಿಸ್ಟ್ ನಲ್ಲಿದ್ಧಾರೆ ಎಂದು ಹೇಳಿದ್ದಾನೆ. ಅಲ್ಲದೇ ಈತನೆ ಎಂಎಂ ಕಲಬುರ್ಗಿ ಹತ್ಯೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದಾನೆ ಎಂದು ತಿಳಿದು ಬಂದಿದೆ.

ಆತನಿಂದ ವಶಪಡಿಸಿಕೊಂಡಿರುವ ಡೈರಿಯಲ್ಲಿ ಕರ್ನಾಟಕದ ಐದು ಮಂದಿ ಬುದ್ದಿ ಜೀವಿಗಳ ಹೆಸರಿದ್ದು, ತನಿಖೆಯ ವೇಳೆ ಬಹಿರಂಗವಾಗಿದೆ. ನಾಟಕಗಾರ ಹಾಗೂ ಲೇಖಕ ಗಿರೀಶ್‍ ಕಾರ್ನಾಡ್‍, ಚಂದ್ರೇಶೇಖರ ಪಾಟೀಲ್‍, ಪ್ರೊ. ಕೆಎಸ್‍ ಭಗವಾನ್‍, ಬರಗೂರು ರಾಮ ಚಂದ್ರಪ್ಪ, ಮಾಜಿ ಸಚಿವೆ ಬಿ.ಟಿ ಲಲಿತಾ ನಾಯಕ್‍ ಹೆಸರಿದ್ದು ಗೌರಿ ಲಂಕೇಶ್‍ ಹೆಸರು ಕೂಡ ಡೈರಿಯಲ್ಲಿದೆ. ಈಗಾಗಲೇ ಗೌರಿ  ಲಂಕೇಶ್‍ ಹತ್ಯೆಯಾಗಿದ್ದು ಇನ್ನುಳಿದ ಐದು ಮಂದಿಯ ಹತ್ಯೆಗೆ ಸಂಚು ರೂಪಿಸಲಾಗಿದೆ ಎಂದು ತಿಳಿದುಬಂದಿದೆ.

ಅಲ್ಲದೇ ಡೈರಿಯಲ್ಲಿ ಹಲವು ಸೀಕ್ರೆಟ್ ಕೋಡ್‍‍ಗಳೂ ಕೂಡ ಇದ್ದು ವಿಶೇಷ ತನಿಖಾ ದಳದ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ. ಮನೆ ಸದಸ್ಯರ ಪ್ರಕಾರ, ಕಲ್ಬುರ್ಗಿ ಹತ್ಯೆ ಮಾಡಿದ ಆರೋಪಿ ಕೂಡ ಇದೇ ವ್ಯಕ್ತಿಯನ್ನು ಹೋಲುತ್ತಾನೆ ಎಂದು ಹೇಳಲಾಗಿದೆ.

Leave a Reply

Your email address will not be published.

Social Media Auto Publish Powered By : XYZScripts.com