ರಾಷ್ಟ್ರ ರಾಜಕಾರಣಕ್ಕೆ ಮಾಜಿ ಸಿಎಂ ಸಿದ್ದರಾಮಯ್ಯ ಹೋಗ್ತಿಲ್ವಂತೆ….ಕಾರಣವೇನು ?

ಬಾಗಲಕೋಟೆ : ಸಮ್ಮಿಶ್ರ ಸರಕಾರದಲ್ಲಿ ನನ್ನನ್ನು ಕಡೆಗಣಿಸಿಲ್ಲ. ನಾನೇ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ. ನನ್ನನ್ನು ಕಡೆಗಣಿಸಿದ್ದಾರೆ ಅಂತ ಯಾರು ಹೇಳಿದರು ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಕೇಳಿದ್ದಾರೆ.

ಬಾದಾಮಿಯಲ್ಲಿ ತನ್ನನ್ನು ಗೆಲ್ಲಿಸಿದ ಜನತೆಗೆ ಕೃತಜ್ಞತೆ ಸಲ್ಲಿಸಲು ತೆರಳಿರುವ ಸಿದ್ದರಾಮಯ್ಯ ಸುದ್ದಿಗಾರರನ್ನುದ್ದೇಶಿಸಿ ಮಾತನಾಡಿದ್ದಾರೆ. ಸಮ್ಮಿಶ್ರ ಸರಕಾರ ರಚನೆ ವೇಳೆ ನನ್ನ ಸಲಹೆ ಪಡೆಯಲಾಗಿದೆ. ನನ್ನ ಆಪ್ತರು ಪರಮಾಪ್ತರು ಯಾರನ್ನು ಮೂಲೆಗುಂಪು ಮಾಡಿಲ್ಲ. ಸಚಿವ ಸ್ಥಾನ ಸಿಕ್ಕವರು,ಸಿಗದೆ ಇರುವವರು ಎಲ್ಲರೂ ನನ್ನ ಆಪ್ತರು, ಪರಮಾಪ್ತರೇ. ಸಮ್ಮಿಶ್ರ ಸರಕಾರದಲ್ಲಿ ಅಸಮಾಧಾನಗಳು ಸಾಮಾನ್ಯ. ಸಾಮಾಜಿಕ ನ್ಯಾಯದಡಿ ಎಲ್ಲರಿಗೂ ಸಚಿವ ಸ್ಥಾನ ಸಿಕ್ಕಿದೆ. ಇನ್ನೂ ಆರು ಸಚಿವ ಸ್ಥಾನ ಬಾಕಿ ಇವೆ. ಅವುಗಳನ್ನು ಸಾಮಾಜಿಕ ನ್ಯಾಯದಡಿ ಹಂಚಿಕೆ ಮಾಡಲಾಗುವುದು ಎಂದಿದ್ದಾರೆ.

ನಾನು ರಾಷ್ಟ್ರ ರಾಜಕಾರಣಕ್ಕೆ ಹೋಗುತ್ತೇನೆ ಎಂದು ಯಾರು ಹೇಳಿದರು. ಅದೆಲ್ಲ ಮಾಧ್ಯಮಗಳ ಸೃಷ್ಠಿ. ಬಾದಾಮಿ ಗೆಲುವಿಗೆ ಶ್ರಮಿಸಿದ್ದಕ್ಕೆ ಜನರಿಗೆ ಧನ್ಯವಾದ ಹೇಳಲು ಬಂದಿದ್ದೇನೆ. ಬಾದಾಮಿ ಒಂದು ಪ್ರವಾಸಿ ತಾಣ ಇದನ್ನು ಹೆಚ್ಚು ಅಭಿವೃದ್ಧಿ ಮಾಡೋದು ನನ್ನ ಕನಸು ಎಂದಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com