ಕುಡಿದ ಮತ್ತಿನಲ್ಲಿ ವಿದ್ಯಾರ್ಥಿಗಳ ಮೇಲೆ ಅಟ್ಟಹಾಸ ಮೆರೆದ ಶಿಕ್ಷಕ…ಅಷ್ಟಕ್ಕೂ ಆಗಿದ್ದೇನು ?

ವಿಜಯಪುರ : ಕುಡಿದ ಮತ್ತಿನಲ್ಲಿ ಶಿಕ್ಷಕನೊಬ್ಬ ವಿದ್ಯಾರ್ಥಿಗಳಿಗೆ  ಮನಬಂದಂತೆ ಥಳಿಸಿದ ಘಟನೆ ನಡೆದಿದೆ.  ಥಳಿತಕ್ಕೊಳಗಾದ ವಿದ್ಯಾರ್ಥಿ ಕಣ್ಣಿಗೆ ತೀವ್ರ ಪೆಟ್ಟು ಬಿದ್ದಿದ್ದು, ಗಾಯಗೊಂಡ ವಿದ್ಯಾರ್ಥಿಯನ್ನು ಸದ್ಯ ಆಸ್ಪತ್ರೆಗೆ ದಾಖಲಿಸಲಾಗಿದೆ.

ಸಿಂದಗಿ ತಾಲ್ಲೂಕಿನ ಮೊರಟಗಿಯ ಜನತಾ ಕಾಲೋನಿಯ ಸರ್ಕಾರಿ ಕನ್ನಡ ಗಂಡು ಮಕ್ಕಳು ಪ್ರಾಥಮಿಕ ಶಾಲೆಯಲ್ಲಿ ಘಟನೆ ನಡೆದಿದೆ. ಶಿಕ್ಷಕ ನಗನೂರ ಎಂಬಾತ ನಿನ್ನೆ ಕುಡಿದುಕೊಂಡು ಶಾಲೆಗೆ ಬಂದಿದ್ದ. ಈ ವೇಳೆ ಕಾರಣವಿಲ್ಲದೆ ವಿದ್ಯಾರ್ಥಿ ನಿಂಗಪ್ಪ ಎಂಬ ಬಾಲಕನಿಗೆ ಥಳಿಸಿದ್ದಾನೆ. ಈ ವೇಳೆ ವಿದ್ಯಾರ್ಥಿ ಕಣ್ಣಿಗೆ ಪೆಟ್ಟು ಬಿದ್ದಿದ್ದು, ಶಿಕ್ಷಕ ಈ ವಿಚಾರವನ್ನು ಪೋಷಕರಿಗೆ ಹೇಳದೆ  ತಾನೇ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದಿದ್ದಾನೆ.

ಹೆಚ್ಚಿನ ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ಕರೆದ್ಯೂಯುವಂತೆ ವೈದ್ಯರು ಸಲಹೆ ನೀಡಿದ್ದರೂ ಅದನ್ನು ಲೆಕ್ಕಕ್ಕೆ ತೆಗೆದುಕೊಳ್ಳದೆ ಮಾನವಿಯತೆ ಮರೆತು ವಿದ್ಯಾರ್ಥಿಯನ್ನು ಮಾರ್ಗಮಧ್ಯದಲ್ಲಿ ಬಿಟ್ಟು ಹೋಗಿದ್ದಾನೆ. ಬಳಿಕ ಬಾಲಕ ಮನೆಗೆ ಹೋದಾಗ ಪೋಷಕರಿಗೆ ಈ ವಿಷಯ ತಿಳಿದಿದ್ದು, ತಮ್ಮ ಮಗನ ದುಸ್ಥಿತಿಗೆ ನಗನೂರ ಶಿಕ್ಷಕನೇ ಕಾರಣವೆಂದು ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಶಿಕ್ಷಕನ ಅಮಾನವಿಯ ಕೃತ್ಯಕ್ಕೆ ಗ್ರಾಮಸ್ಥರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು,  ಸಿಂದಗಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Leave a Reply

Your email address will not be published.

Social Media Auto Publish Powered By : XYZScripts.com