Cricket : ರಾಶಿದ್ ಸ್ಪಿನ್ ದಾಳಿಗೆ ಬಾಂಗ್ಲಾ ತತ್ತರ : ಟಿ-20 ಸರಣಿ ಅಫಘಾನಿಸ್ತಾನ ಕೈವಶ

ಉತ್ತರಾಖಂಡ್ ನ ಡೆಹ್ರಾಡೂನ್ ನಲ್ಲಿರುವ ರಾಜೀವ್ ಗಾಂಧಿ ಮೈದಾನದಲ್ಲಿ ಮಂಗಳವಾರ ನಡೆದ ಎರಡನೇ ಟಿ-20 ಪಂದ್ಯದಲ್ಲಿ ಬಾಂಗ್ಲಾದೇಶದ ವಿರುದ್ಧ ಅಫಘಾನಿಸ್ತಾನ 6 ವಿಕೆಟ್ ಜಯ ಗಳಿಸಿದೆ. 3 ಪಂದ್ಯಗಳ ಟಿ-20 ಸರಣಿಯನ್ನು ಅಫಘಾನಿಸ್ತಾನ ತನ್ನ ಕೈವಶ ಮಾಡಿಕೊಂಡಿದೆ.

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ನಡೆಸಿದ ಬಾಂಗ್ಲಾದೇಶ ಅಫ್ಘಾನಿಸ್ತಾನ ತಂಡದ ಬೌಲರ್ ರಾಶಿದ್ ಖಾನ್ ಸ್ಪಿನ್ ದಾಳಿಗೆ ಬಾಂಗ್ಲಾದೇಶ ತತ್ತರಿಸಿತು. ಪರಿಣಾಮವಾಗಿ ಬಾಂಗ್ಲಾ ನಿಗದಿತ 20 ಓವರುಗಳಲ್ಲಿ 8 ವಿಕೆಟ್ ಕಳೆದುಕೊಂಡು 134 ರನ್ ಮೊತ್ತ ಕಲೆಹಾಕಿತು.

ಗುರಿಯನ್ನು ಬೆನ್ನತ್ತಿದ ಅಫಘಾನಿಸ್ತಾನ 18.5 ಓವರುಗಳಲ್ಲಿ 4 ವಿಕೆಟ್ ನಷ್ಟಕ್ಕೆ 135 ರನ್ ಸೇರಿಸಿ 6 ವಿಕೆಟ್ ಗಳ ಭರ್ಜರಿ ಗೆಲುವು ಸಾಧಿಸಿತು. ಅಫಘಾನಿಸ್ತಾನದ ಪರವಾಗಿ ಸಮೀವುಲ್ಲಾ ಶೇನ್ವಾರಿ 49 ಹಾಗೂ ಮೊಹಮ್ಮದ್ ನಬಿ ಅಜೇಯ 31 ರನ್ ಗಳಿಸಿ ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸಿದರು.

Leave a Reply

Your email address will not be published.

Social Media Auto Publish Powered By : XYZScripts.com